ಸತತ ಎರಡನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ, ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ...

ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಎರಡನೇ ದಿನ ಎಲ್ಲಾ ಮಹಾನಗರಗಳಲ್ಲಿ ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 19 ಪೈಸೆ ಏರಿಕೆಯಾದರೆ ಡೀಸೆಲ್ ಬೆಲೆ ಲೀಟರ್ ಗೆ 21 ಪೈಸೆಯಷ್ಟು ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಸತತ ಎರಡನೇ ದಿನ ಎಲ್ಲಾ ಮಹಾನಗರಗಳಲ್ಲಿ ಏರಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 19 ಪೈಸೆ ಏರಿಕೆಯಾದರೆ ಡೀಸೆಲ್ ಬೆಲೆ ಲೀಟರ್ ಗೆ 21 ಪೈಸೆಯಷ್ಟು ಏರಿಕೆಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ 90 ರೂಪಾಯಿ 74 ಪೈಸೆಯಷ್ಟಿದ್ದರೆ, ಡೀಸೆಲ್ ದರ 81 ರೂಪಾಯಿ 12 ಪೈಸೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ ಗೆ 97 ರೂಪಾಯಿ 12 ಪೈಸೆಯಾಗಿದ್ದರೆ ಡೀಸೆಲ್ ಬೆಲೆ ಲೀಟರ್ ಗೆ 88 ರೂಪಾಯಿ 19 ಪೈಸೆಯಷ್ಟಾಗಿದೆ.

ತೈಲ ಮಾರುಕಟ್ಟೆ ಕಂಪೆನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಾಮರ್ಶಿಸುತ್ತವೆ. ದರದಲ್ಲಿ ಪರಿಷ್ಕರಣೆಯಿದ್ದರೆ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಮಾಡುತ್ತವೆ. ವ್ಯಾಟ್ ನಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿರುತ್ತದೆ.

ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 93 ರೂಪಾಯಿ 77 ಪೈಸೆಯಿದ್ದು, ಡೀಸೆಲ್ ದರ 86 ರೂಪಾಯಿ 01 ಪೈಸೆಯಿದೆ. ನಿನ್ನೆಗಿಂತ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ 10 ಪೈಸೆ, ಡೀಸೆಲ್ ದರ 14 ಪೈಸೆ ಏರಿಕೆಯಾಗಿದೆ.

ಕಳೆದ ಫೆಬ್ರವರಿ 23ರ ನಂತರ ಮೆಟ್ರೊಪಾಲಿಟನ್ ನಗರಗಳಲ್ಲಿ ಇಂಧನ ಬೆಲೆ ಏರಿಕೆಯಾಗಿದ್ದು ನಿನ್ನೆ ಮೇ 4ರಂದು. ಇಂದು ಎರಡನೇ ದಿನವೂ ಭಾರತೀಯ ತೈಲ ಕಂಪೆನಿಗಳು ದರವನ್ನು ಹೆಚ್ಚಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com