ನವದೆಹಲಿ: ಸೆಮಿಕಂಡಕ್ಟರ್ ಕೊರತೆಯಿಂದ ವಾಹನ ತಯಾರಕ ಸಂಸ್ಥೆಗಳು ಅತೀವ ತೊಂದರೆಗೆ ಸಿಲುಕಿದ್ದು, ಅದರಿಂದಾಗಿ ಅವುಗಳ ಉತ್ಪಾದನಾ ಸಾಮರ್ಥ್ಯ ಕುಸಿತಗೊಳ್ಳುತ್ತಲೇ ಸಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕಾರು ತಯಾರಕ ಸಂಸ್ಥೆಗಳ ಉತ್ಪಾದನಾ ಸಾಮರ್ಥ್ಯ ಶೇ.27ರಷ್ಟು ಕಡಿತಗೊಂಡಿರುವುದಾಗಿ ಅಧ್ಯಯನ ತಿಳಿಸಿದೆ.
ದ್ವಿಚಕ್ರವಾಹನ ತಯಾರಕ ಸಂಸ್ಥೆಗಳೂ ಇದೇ ಸಂಕಷ್ಟವನ್ನು ಎದುರಿಸುತ್ತಿದೆ. ಕಳೆದ ವರ್ಷ 13.82 ಲಕ್ಷ ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ತಯಾರಕ ಘಟಕಗಳಿಂದ ಮಾರುಕಟ್ಟೆ ಪ್ರವೇಶಿಸಿದ್ದವು. ಈಗ ಆ ಸಂಖ್ಯೆ 10.17 ಲಕ್ಷಕ್ಕೆ ಬಂದು ತಲುಪಿದೆ.
ಅದರ ಮೇಲೆ ಸ್ಕೂಟರ್ ಮಾರಾಟ ಪ್ರಮಾಣ ಶೇ.21 ಪ್ರತಿಶತ ಕುಸಿದಿದೆ ಎಂದು ತಿಳಿದುಬಂದಿದೆ. ಆಟೊಮೊಬೈಲ್ ಸಂಸ್ಥೆಗಳು ಉದ್ಯಮದಲ್ಲಿನ ಚೇತರಿಕೆಗಾಗಿ ಹಬ್ಬದ ಸಂದರ್ಭವನ್ನು ಎದುರುನೋಡುತ್ತಿದೆ. ಹಬ್ಬಗಳ ಸಮಯದಲ್ಲಾದರೂ ವ್ಯಾಪಾರ ಹೆಚ್ಚಾಗುವ ನಿರೀಕ್ಷೆ ಅವುಗಳದ್ದು.
ಸೂಕ್ಷ್ಮ ಜಾಹೀರಾತು ಕೆಟಗರಿಗಳನ್ನು ತೆಗೆಯಲಿರುವ ಫೇಸ್ ಬುಕ್ ಮಾತೃಸಂಸ್ಥೆ ಮೆಟಾ
ನೋಟು ಅಮಾನ್ಯೀಕರಣಕ್ಕೆ 5 ವರ್ಷ: ಭಾರತೀಯರ ಬಳಿ ಶೇ.57 ಕ್ಕಿಂತ ಹೆಚ್ಚು ನಗದು ಹಣ!
ಬಜೆಟ್ 2022-23: ಹಲವು ತೆರಿಗೆ ವಿನಾಯಿತಿಗಳಿಗೆ ಬ್ರೇಕ್ ಹಾಕಲು ಹಣಕಾಸು ಸಚಿವಾಲಯ ಚಿಂತನೆ; ವಿವರ ಹೀಗಿದೆ...
ದೀಪಾವಳಿ ಸಡಗರ: ಗ್ರಾಹಕರು ಹಾಲ್ ಮಾರ್ಕ್ ಇರುವ ಚಿನ್ನಾಭರಣ ಖರೀದಿಸಿ- ಕೇಂದ್ರ ಸರ್ಕಾರ
Advertisement