ಸಾಲ ವಂಚನೆ ಪ್ರಕರಣ: ಯೆಸ್ ಬ್ಯಾಂಕ್ ಎಂ.ಡಿ, ಸಿ ಇ ಒ ರಾಣಾ ಕಪೂರ್ ವಿರುದ್ಧ ಚಾರ್ಜ್ ಶೀಟ್ ಜಾರಿ

ರಾಣಾ ಕಪೂರ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನವದೆಹಲಿಯ ಪ್ರತಿಷ್ಟಿತ ಪ್ರದೇಶದಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ್ದಾರೆ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಯೆಸ್ ಬ್ಯಾಂಕ್ ಎಂ.ಡಿ ಮತ್ತು ಸಿಇಒ ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು ಕಪೂರ್ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಾಂತ ಸಂಸ್ಥೆಯ ಮಾಲೀಕ ಗೌತಮ್ ಥಾಪರ್ ಹೆಸರೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.  

ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಈ ಚಾರ್ಜ್ ಶೀಟ್ ಜಾರಿ ಮಾಡಿದೆ. ಯೆಸ್ ಬ್ಯಾಂಕ್ ಎಂ.ಡಿ ಮತ್ತು ಸಿಇಒ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನವದೆಹಲಿಯ ಪ್ರತಿಷ್ಟಿತ ಪ್ರದೇಶದಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. 

ಈ ಖರೀದಿ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಅವರ ಸಂಸ್ಥೆಯ ಹೆಸರಿನಲ್ಲಿ ನಡೆಸಲಾಗಿದೆ. ಖರೀದಿ ನಂತರ ರಾಣಾ ಕಪೂರ್ ಅವರು ಗೌತಂ ಥಾಪರ್ ಅವರ ಹಲವು ಸಂಸ್ಥೆಗಳಿಗೆ 1,360 ಕೋಟಿ ರೂ. ಸಾಲ ಮಂಜೂರು ಮಾಡಿದ್ದರು.

ಈ ಸಾಲದ ಮೊತ್ತವನ್ನು ಅವರು ಯಾವುದಕ್ಕೆ ಬಳಸಲಾಗುತ್ತದೆ ಎಂದು ನಮೂದಿಸಲಾಗಿತ್ತೋ ಆ ಕಾರ್ಯಗಳಿಗೆ ವಿನಿಯೋಗವಾಗದೇ ಇರುವುದು ಸಿಬಿಐ ತನಿಖೆಯಲ್ಲಿ ತಿಳಿದುಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com