ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 43 ರೂ. ಹೆಚ್ಚಳ

ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪೆಟ್ರೋಲಿಯಂ ಕಂಪೆನಿಗಳು 43 ರೂಪಾಯಿ 50 ಪೈಸೆ ಹೆಚ್ಚಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪೆಟ್ರೋಲಿಯಂ ಕಂಪೆನಿಗಳು 43 ರೂಪಾಯಿ 50 ಪೈಸೆ ಹೆಚ್ಚಿಸಿವೆ.

ಹೊಸ ದರ ಇಂದು ಅಕ್ಟೋಬರ್ 1ರಂದು ಜಾರಿಗೆ ಬರಲಿದೆ. ದೇಶಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಇಂದು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾವಿರದ 736 ರೂಪಾಯಿ 50 ಪೈಸೆಯಿದೆ. ಈ ಹಿಂದೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಸಾವಿರದ 693 ರೂಪಾಯಿಗಳಿದ್ದವು. 

ಕಳೆದ ತಿಂಗಳು ಸೆಪ್ಟೆಂಬರ್ 1ರಂದು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com