ಕೇಂದ್ರ ಬಜೆಟ್ 2023 ಪರಿಣಾಮ: ಸಾವಿರ ಅಂಕ ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ 280 ಅಂಕಗಳ ಏರಿಕೆ, ಐಟಿಸಿ ಷೇರುಗಳ ಮೌಲ್ಯ ಶೇ.4 ಏರಿಕೆ!

ಅತ್ತ ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವಂತೆಯೇ ಇತ್ತ ಅದರ ಪರಿಣಾಮಗಳು ಷೇರುಮಾರುಕಟ್ಟೆ ಮೇಲೆ ಬೀರಿದ್ದು, ಸೆನ್ಸೆಕ್ಸ್ ಬರೊಬ್ಬರಿ ಸಾವಿರ ಅಂಕಗಳ ಏರಿಕೆಕಂಡು ಮತ್ತೆ 60 ಸಾವಿರ ಅಂಕಗಳ ಗಡಿ ದಾಟಿದೆ.
ಭಾರತೀಯ ಷೇರುಮಾರುಕಟ್ಟೆ
ಭಾರತೀಯ ಷೇರುಮಾರುಕಟ್ಟೆ

ಮುಂಬೈ: ಅತ್ತ ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವಂತೆಯೇ ಇತ್ತ ಅದರ ಪರಿಣಾಮಗಳು ಷೇರುಮಾರುಕಟ್ಟೆ ಮೇಲೆ ಬೀರಿದ್ದು, ಸೆನ್ಸೆಕ್ಸ್ ಬರೊಬ್ಬರಿ ಸಾವಿರ ಅಂಕಗಳ ಏರಿಕೆಕಂಡು ಮತ್ತೆ 60 ಸಾವಿರ ಅಂಕಗಳ ಗಡಿ ದಾಟಿದೆ.

ಹೌದು.. ವಹಿವಾಟು ಆರಂಭವಾದಾಗಿನಿಂದಲೂ ಚೇತೋಹಾರಿ ವ್ಯವಹಾರ ನಡೆಸುತ್ತಿದ್ದ ಭಾರತೀಯ ಷೇರುಮಾರುಕಟ್ಟೆ ಬಜೆಟ್ ಮಂಡನೆ ಆರಂಭವಾಗಿ ಕೆಲ ಘೋಷಣೆಗಳಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಏರಿಕೆ ಕಂಡಿದ್ದು, ಬಿಎಸ್ ಇ ಸೆನ್ಸೆಕ್ಸ್ ಶೇ.1.86%ರಷ್ಟು ಅಂದರೆ  ಬರೊಬ್ಬರಿ 1,106.97 ಅಂಕಗಳ ಏರಿಕೆಯಾಗಿ 60,656.87ಅಂಕಗಳಿಗೆ ತಲುಪಿದೆ. ಅಂತೆಯೇ ನಿಫ್ಟಿ ಕೂಡ ಶೇ.1.56%ರಷ್ಟು ಅಂದರೆ 279.15 ರಷ್ಚು ಏರಿಕೆಯಾಗಿ 17,941.30 ಅಂಕಗಳಿಗೆ ಏರಿಕೆಯಾಗಿದೆ.

ಇತ್ತ ಮಾರುಕಟ್ಟೆ ಏರಿಕೆಯಾಗುತ್ತಲೇ ಪ್ರಮುಖ ಸಂಸ್ಥೆ ಐಟಿಸಿ ಷೇರುಗಳ ಮೌಲ್ಯದಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ಐಟಿಸಿ ಷೇರುಗಳ ಮೌಲ್ಯದಲ್ಲಿ ಗರಿಷ್ಠ ಶೇ. 4 ರಷ್ಟು ಏರಿಕೆಕಂಡುಬಂದಿದೆ. ಅಂತೆಯೇ ಐಸಿಐಸಿಐ ಬ್ಯಾಂಕ್ ನ ಷೇರುಗಳ ಮೌಲ್ಯದಲ್ಲಿ ಶೇ.3.02ರಷ್ಟು, ಟಾಟಾ ಸ್ಟೀಲ್ ಷೇರುಗಳ ಮೌಲ್ಯದಲ್ಲಿ ಶೇ.2.42ರಷ್ಟು ಮತ್ತು ಟಾಟಾ ಕನ್ಸೂಮರ್ ಷೇರುಗಳ ಮೌಲ್ಯದಲ್ಲಿ ಶೇ.1.93ರಷ್ಟು ಮತ್ತು ಎಲ್ ಅಂಡ್ ಟಿ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ. 2.06ರಷ್ಚು ಏರಿಕೆ ಕಂಡುಬಂದಿದೆ.

ಅದಾನಿ ಗ್ರೀನ್ ಗೆ ನಷ್ಟ
ಇತ್ತ ಅದಾನಿ ಗ್ರೀನ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಬರೊಬ್ಬರಿ ಶೇ.2.11ರಷ್ಟು ಕುಸಿತವಾಗಿದ್ದು, ಷೇರು ಮೌಲ್ಯ 1198.05ಕ್ಕೆ ಕುಸಿತವಾಗಿದೆ. ಇತ್ತ ಮೊಬೈಲ್ ಸೇವಾ ಸಂಸ್ಥೆಗಳ ಪೈಕಿ ರಿಲಯನ್ಸ್ (ಶೇ.0.18ರಷ್ಚು ಏರಿಕೆ), ಭಾರ್ತಿ ಏರ್ಟೆಲ್ (ಶೇ.0.75ರಷ್ಟು ಏರಿಕೆ) ಸಂಸ್ಥೆಯ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ವೊಡಾಫೋನ್ ಐಡಿಯಾ (ಶೇ.0.71ರಷ್ಚು ಇಳಿಕೆ)ಷೇರುಗಳ ಮೌಲ್ಯ ಕುಸಿತವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com