ಫಲಿಸಿತು ಸರ್ಕಾರದ ತಂತ್ರ: ಇಳಿಕೆಯತ್ತ ಈರುಳ್ಳಿ ದರ, ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್‌? ಇಲ್ಲಿದೆ ಮಾಹಿತಿ

ಗಗನಕ್ಕೇರಿದ್ದ ಈರುಳ್ಳಿ ದರವನ್ನು ಇಳಿಕೆ ಮಾಡುವಲ್ಲಿ ಸರ್ಕಾರ ರೂಪಿಸಿದ್ದ ತಂತ್ರ ಕೊನೆಗೂ ಫಲ ನೀಡಿದೆ. ಸರ್ಕಾರದ ಪ್ರಯತ್ನ ಪರಿಣಾಮವಾಗಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 55 ರಿಂದ 50 ರೂ.ಗೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಅಂಗಡಿಗಳಲ್ಲಿ ದರ ಇನ್ನೂ ಕಡಿಮೆಯಾಗಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗಗನಕ್ಕೇರಿದ್ದ ಈರುಳ್ಳಿ ದರವನ್ನು ಇಳಿಕೆ ಮಾಡುವಲ್ಲಿ ಸರ್ಕಾರ ರೂಪಿಸಿದ್ದ ತಂತ್ರ ಕೊನೆಗೂ ಫಲ ನೀಡಿದೆ. ಸರ್ಕಾರದ ಪ್ರಯತ್ನ ಪರಿಣಾಮವಾಗಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 55 ರಿಂದ 50 ರೂ.ಗೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಅಂಗಡಿಗಳಲ್ಲಿ ದರ ಇನ್ನೂ ಕಡಿಮೆಯಾಗಿಲ್ಲ.

ಬೆಲೆ ಏರಿಕೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಭಾವಿಸಿರುವ ಚಿಲ್ಲರೆ ಅಂಗಡಿಗಳು 5 ಕೆಜಿ ಈರುಳ್ಳಿಯನ್ನು 390-400 ರೂ.ಗೆ ಮಾರಾಟ ಮಾಡುತ್ತಿವೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರಲ್ಲಿ ಈರುಳ್ಳಿ ಬೆಳೆ ಲಭ್ಯವಿದ್ದು, ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿದ್ದರು. ಕೆಲ ದಿನಗಳ ಹಿಂದಷ್ಟೇ ವಿಜಯಪುರದಲ್ಲಿ ಪ್ರತಿ ಕೆಜಿ ಈರುಳ್ಳಿಯನ್ನು ರೂ.100ಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಈ ರೈತರಲ್ಲಿ ಸಂತಸವನ್ನು ತರಿಸಿತ್ತು.

ಬೆಂಗಳೂರಿನ ಎಪಿಎಂಸಿಯ ಸಗಟು ವ್ಯಾಪಾರಿ ರವಿ ಬಾಲಕೃಷ್ಣ ಅವರು ಮಾತನಾಡಿ, ಈರುಳ್ಳಿ ಬೆಲೆ ಪ್ರತಿ ಕೆಜಿಗೆ ರೂ.100 ಗಡಿ ದಾಟಲಿದೆ ಎಂಬ ಸುದ್ದಿ ಕೇಳಿದ್ದ ಬೆಳೆಗಾರರು ಈರುಳ್ಳಿಯನ್ನು ಮಾರುಕಟ್ಟೆಗಳಿಗೆ ತಲುಪಿಸುವುದರಿಂದ ಹಿಂದೆ ಸರಿದಿದ್ದರು. ಸರ್ಕಾರ ಮಧ್ಯ ಪ್ರವೇಶಿಸಿ ಬೆಲೆ ಇಳಿಕೆಯಾಗುವಂತೆ ಮಾಡಿದೆ. ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿ ದರ ಶೀಘ್ರದಲ್ಲೇ ರೂ.25ಕ್ಕೆ ಇಳಿಕೆಯಾಗಲಿದೆ. ಇದೀಗ ಆತಂಕಗೊಂಡಿರುವ ರೈತರು ತಮ್ಮ ಬಳಿಯಿರುವ ಈರುಳ್ಳಿಗಳನ್ನು ಮತ್ತೆ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಐದು ರಾಜ್ಯಗಳಿಗೆ ಚುನಾವಣೆ ಇರುವುದರಿಂದ ಸರ್ಕಾರ ‘ಬೆಲೆ ಬ್ರೇಕ್’ ನೀತಿ ಅನುಸರಿಸುತ್ತಿದೆ. “ನಾವು ಅವರನ್ನು ತಪ್ಪು ಎಂದು ಹೇಳುವುದಿಲ್ಲ, ಆದರೆ, ದುರ್ಬಲ ರೈತನನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಬೆಲೆಗಳು ತೀರಾ ಕಡಿಮೆ ಇರುವ ಬೆಳೆಗಳಿಗೆ ಕನಿಷ್ಠ ಬೆಲೆ ಗ್ಯಾರಂಟಿ ನೀಡಬೇಕಲ್ಲವೇ? ಈರುಳ್ಳಿ ಕೊರತೆಯನ್ನು ಪರಿಗಣಿಸಿ ಹಣ ಮಾಡುವ ಅವಕಾಶವನ್ನು ರೈತ ಕಳೆದುಕೊಂಡಿದ್ದಾನೆಂದು ಹೇಳಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ಬೆಲೆ ಏರಿಕೆಯಾಗದಿದ್ದರೆ, ಮುಂದಿನ ನಾಲ್ಕು ವಾರಗಳವರೆಗೆ ಬೆಲೆ ಸ್ಥಿರವಾಗಿರುತ್ತದೆ. ಈ ವೇಳೆ ಚುನಾವಣೆ ಮುಖ್ಯ ಅಂಶವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com