ಸ್ವಿಗ್ಗಿ 2023: ಈ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡ ಬಿರಿಯಾನಿ, ಸೆಕೆಂಡಿಗೆ 2.5 ಆರ್ಡರ್; ಬೆಂಗಳೂರು ಕೇಕ್ ಕ್ಯಾಪಿಟಲ್

2023ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದು, ಸತತ ಎಂಟನೇ ವರ್ಷದಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಅಗ್ರಸ್ಥಾನ ಪಡೆದುಕೊಂಡಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: 2023ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದು, ಸತತ ಎಂಟನೇ ವರ್ಷದಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಅಗ್ರಸ್ಥಾನ ಪಡೆದುಕೊಂಡಿದೆ. 

ಪ್ರತಿ 5.5 ಚಿಕನ್ ಬಿರಿಯಾನಿಗಳಿಗೆ, ಒಂದು ವೆಜ್ ಬಿರಿಯಾನಿ ಆರ್ಡರ್ ಮಾಡಲಾಗಿದೆ ಮತ್ತು ಬಿರಿಯಾನಿ ಆರ್ಡರ್‌ ಮೂಲಕ 2.49 ಮಿಲಿಯನ್ ಹೊಸ ಬಳಕೆದಾರರು ಸ್ವಿಗ್ಗಿಗೆ ಪ್ರವೇಶ ಪಡೆದಿದ್ದಾರೆ.

ಪ್ರತಿ ಆರನೇ ಬಿರಿಯಾನಿಯನ್ನು ಹೈದರಾಬಾದ್‌ನಿಂದ ಆರ್ಡರ್ ಮಾಡಲಾಗಿದೆ ಮತ್ತು ನಗರದ ಸ್ವಿಗ್ಗಿ ಬಳಕೆದಾರರು ಈ ವರ್ಷ 1,633 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. 

ಸ್ವಿಗ್ಗಿ ಗುರುವಾರ 2023ರ ವರದಿಯನ್ನು ಬಿಡುಗಡೆ ಮಾಡಿದ್ದು, ಚಂಡೀಗಢದಲ್ಲಿ ಬಿರಿಯಾನಿಯನ್ನು ಇಷ್ಟಪಡುವ ಕುಟುಂಬವೊಂದು ಅಕ್ಟೋಬರ್‌ನಲ್ಲಿ ಭಾರತ Vs ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಒಂದೇ ಬಾರಿಗೆ 70 ಪ್ಲೇಟ್‌ ಬಿರಿಯಾನಿಗಳನ್ನು ಆರ್ಡರ್ ಮಾಡಿದೆ ಎಂದು ಹೇಳಿದೆ. ಈ ಪಂದ್ಯದ ಸಮಯದಲ್ಲಿ ಸ್ವಿಗ್ಗಿಯಲ್ಲಿ ಪ್ರತಿ ನಿಮಿಷಕ್ಕೆ 250ಕ್ಕೂ ಹೆಚ್ಚು ಬಿರಿಯಾನಿಗಳನ್ನು ಆರ್ಡರ್‌ ಮಾಡಲಾಗಿದೆ.

ಮುಂಬೈನ ಸ್ವಿಗ್ಗಿ ಬಳಕೆದಾರರು 42.3 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್‌ಗಳನ್ನು ಮಾಡಿದ್ದಾರೆ. ಗರಿಷ್ಠ ಆರ್ಡರ್‌ಗಳು ಚೆನ್ನೈ, ದೆಹಲಿ ಮತ್ತು ಹೈದರಾಬಾದ್‌ನಲ್ಲಿ ತಲಾ 10,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಕೇಕ್ ಕ್ಯಾಪಿಟಲ್

2023ರಲ್ಲಿ ಚಾಕೊಲೇಟ್ ಕೇಕ್‌ಗಾಗಿ 8.5 ಮಿಲಿಯನ್ ಆರ್ಡರ್‌ಗಳನ್ನು ನೀಡಿದ್ದರಿಂದ ಬೆಂಗಳೂರು ‘ಕೇಕ್ ಕ್ಯಾಪಿಟಲ್’ ಗೌರವವನ್ನು ಪಡೆದುಕೊಂಡಿದೆ. 2023ರ ಫೆಬ್ರುವರಿಯ ಪ್ರೇಮಿಗಳ ದಿನದಂದು, ದೇಶದಲ್ಲಿ ಪ್ರತಿ ನಿಮಿಷಕ್ಕೆ 271 ಕೇಕ್‌ಗಳನ್ನು ಆರ್ಡರ್ ಮಾಡಲಾಗಿದೆ. ಅಲ್ಲದೆ, ದುರ್ಗಾ ಪೂಜೆಯ ಸಮಯದಲ್ಲಿ 7.7 ಮಿಲಿಯನ್‌ಗಿಂತಲೂ ಹೆಚ್ಚು ಗುಲಾಬ್ ಜಾಮೂನ್‌ಗಳನ್ನು ಆರ್ಡರ್‌ ಮಾಡಲಾಗಿದ್ದು, ರಸಗುಲ್ಲಾ ಆರ್ಡರ್‌ಗಳನ್ನು ಮೀರಿಸಿದೆ.

ನವರಾತ್ರಿಯ ಎಲ್ಲಾ ಒಂಬತ್ತು ದಿನಗಳಲ್ಲಿ ಮಸಾಲಾ ದೋಸೆಯು ವೆಜ್ ಆರ್ಡರ್‌ಗಳಲ್ಲಿ ಟಾಪ್ ಫೇವರಿಟ್ ಆಗಿತ್ತು. ಹೈದರಾಬಾದ್‌ನ ಗ್ರಾಹಕರೊಬ್ಬರು 2023ರಲ್ಲಿ ಇಡ್ಲಿಗಳನ್ನು ಖರೀದಿಸಲು 6 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಕೊರಿಯಾಗೆ ಹೋಲಿಸಿದರೆ ಜಪಾನಿನ ಪಾಕಪದ್ಧತಿಯು ಈ ವರ್ಷ ಎರಡು ಪಟ್ಟು ಹೆಚ್ಚು ಆರ್ಡರ್‌ಗಳನ್ನು ಕಂಡಿದೆ. 2023 ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿರುವುದರಿಂದ, ಸ್ವಿಗ್ಗಿಯಲ್ಲಿ ಸಿರಿಧಾನ್ಯಗಳನ್ನು ಆಧರಿಸಿದ ಭಕ್ಷ್ಯಗಳ ಆರ್ಡರ್‌ಗಳಲ್ಲಿ ಶೇ 124 ರಷ್ಟು ಬೆಳವಣಿಗೆ ಕಂಡಿದೆ ಮತ್ತು ಅವುಗಳನ್ನು ಹುಡುಕಾಟ ನಡೆಸುವುದರಲ್ಲಿಯೂ ಶೇ 38 ರಷ್ಟು ಹೆಚ್ಚಳವಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

ಆರೋಗ್ಯಕರ ಆಹಾರ ವಿಭಾಗದಲ್ಲಿ ನವಣೆ, ಬಕ್‌ವೀಟ್, ಜೋಳ, ಸಜ್ಜೆ, ರಾಗಿ, ರಾಜ್‌ಗಿರಾ ಮತ್ತು ಅಮರಂಥ್ ಹೆಚ್ಚು ಹುಡುಕಲಾದ ಕೀವರ್ಡ್‌ಗಳಾಗಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com