ಗೂಗಲ್ ಇಂಡಿಯಾ ಉದ್ಯೋಗಿಗಳಿಗೆ ಬಿಗ್ ಶಾಕ್: 450 ಉದ್ಯೋಗಿಗಳು ವಜಾ

ಟೆಕ್ ದೈತ್ಯ ಗೂಗಲ್ ಭಾರತದ ವಿವಿಧ ವಿಭಾಗಗಳಲ್ಲಿ ಸುಮಾರು 450ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ. ಗುರುವಾರ ತಡರಾತ್ರಿ ಉದ್ಯೋಗಿಗಳಿಗೆ ತಮ್ಮ ವಜಾಗೊಳಿಸುವ ಬಗ್ಗೆ ಮೇಲ್‌ನ ಮೂಲಕ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಟೆಕ್ ದೈತ್ಯ ಗೂಗಲ್ ಭಾರತದ ವಿವಿಧ ವಿಭಾಗಗಳಲ್ಲಿ ಸುಮಾರು 450ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿದೆ. ಗುರುವಾರ ತಡರಾತ್ರಿ ಉದ್ಯೋಗಿಗಳಿಗೆ ತಮ್ಮ ವಜಾಗೊಳಿಸುವ ಬಗ್ಗೆ ಮೇಲ್‌ನ ಮೂಲಕ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

ಉದ್ಯೋಗದಿಂದ ವಜಾಗೊಂಡಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಈ ಬೆಳವಣಿಗೆ ಕುರಿತು ಗೂಗಲ್‌ ಇಂಡಿಯಾ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಗೂಗಲ್‌ನ ನಲ್ಲಿ ಕೆಲಸ ಮಾಡುತ್ತಿದ್ದ ಸಾಗರ್ ಗಿಲ್ಹೋತ್ರಾ ಎಂಬುವವರು ಲಿಂಕ್ಡ್‌ಇನ್ ನಲ್ಲಿ ಪೋಸ್ಟ್ ಹಾಕಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

"ನನ್ನ ತಂಡವನ್ನು ಬೆಂಬಲಿಸಲು ನಾನು ಹಗಲಿರುಳು ಕೆಲಸ ಮಾಡಿದ್ದೇನೆ ಮತ್ತು ಭಾರತದಲ್ಲಿ ಯೂಟ್ಯೂಬ್ ಲೈವ್ ಶಾಪಿಂಗ್ ಅನ್ನು ಅಳೆಯಲು ಸಹಾಯ ಮಾಡಿದ್ದೇನೆ... ನನ್ನ ಕೊಡುಗೆಗಳ ಹೊರತಾಗಿಯೂ, ಪ್ರತಿಭಾವಂತರನ್ನು ಕೈಬಿಡುವುದನ್ನು ನೋಡುವುದು ದುಃಖಕರವಾಗಿದೆ" ಎಂದು ಹೇಳಿಕೊಂಡಿದ್ದಾರೆ.

ಜನವರಿ 20 ರಂದು, ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಜಾಗತಿಕವಾಗಿ 12,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಯೂಟ್ಯೂಬ್‌ನ ಸಿಇಒ ಸುಸಾನ್ ವೊಜ್ಸಿಕಿ ಅವರು, ಒಂಬತ್ತು ವರ್ಷಗಳ ನಂತರ ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಗುರುವಾರ ಘೋಷಿಸಿದ್ದರು. ನಂತರ ಈ ಸ್ಥಾನಕ್ಕೆ ಭಾರತೀಯ-ಅಮೆರಿಕನ್ ನೀಲ್ ಮೋಹನ್ ಅವರನ್ನು ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com