ಅಮೆರಿಕನ್ ಡಾಲರ್ ಎದುರು 13 ಪೈಸೆ ಕುಸಿದ ರೂಪಾಯಿ ಮೌಲ್ಯ

ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಬುಧವಾರ ಮತ್ತೆ 13 ಪೈಸೆ ಕುಸಿಯುವ ಮೂಲಕ 82.01 ರೂಪಾಯಿಗೆ ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಬುಧವಾರ ಮತ್ತೆ 13 ಪೈಸೆ ಕುಸಿಯುವ ಮೂಲಕ 82.01 ರೂಪಾಯಿಗೆ ತಲುಪಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಳ ಮತ್ತು ಆಮದುದಾರರಿಂದ ತಿಂಗಳಾಂತ್ಯದ ಡಾಲರ್ ಬೇಡಿಕೆ ಹೆಚ್ಚಾದ ಪರಿಣಾಮ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 13 ಪೈಸೆ ಕುಸಿದಿದ್ದು, ಪ್ರತಿ ಡಾಲರ್ ಗೆ 82.01 ರೂಪಾಯಿಗೆ ತಲುಪಿದೆ.

ಅಮೆರಿಕನ್ ಫೆಡರಲ್ ರಿಸರ್ವ್‌ನ ಬಡ್ಡಿದರದ ನಿರ್ಧಾರಕ್ಕೆ ಮುಂಚಿತವಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದರೂ ಸಹ, ದೇಶಿ ಈಕ್ವಿಟಿ ಮಾರುಕಟ್ಟೆಯ ಪಾಸಿಟಿವ್ ಸೂಚನೆಗಳು ಮತ್ತು ವಿದೇಶಿ ನಿಧಿಗಳ ಒಳಹರಿವು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಯಿತು ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com