ಚಿಕನ್ ಬರ್ಗರ್ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ, ನೆಟ್ಟಿಗರ ಕಿಡಿ!

ನ್ಯಾಷನಲ್ ಕ್ರಶ್ ರಸ್ಮಿಕಾ ಮಂದಣ್ಣ ಇದೀಗ ಚಿಕನ್​ ಬರ್ಗರ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಸ್ಮಿಕಾ ಮಂದಣ್ಣ ಇದೀಗ ಚಿಕನ್​ ಬರ್ಗರ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾನು ನಾನ್​-ವೆಜ್ ತಿನ್ನಲ್ಲ ಎಂದು ಈ ಹಿಂದೆ  ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದರು. ಹಾಗಾಗಿ ರಶ್ಮಿಕಾ ಮಂದಣ್ಣ ಅವರ ಈ ದ್ವಂದ್ವನೀತಿಯನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ತಾನು ವೆಜ್ ಎಂದು ಈ ಹಿಂದೆ ರಶ್ಮಿಕಾ ಮಂದಣ್ಣ ಸುಳ್ಳು ಹೇಳಿದ್ದು ಏಕೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಮ್ಯಾಕ್ ಡೊನಾಲ್ಡ್ ಜಾಹೀರಾತಿನಲ್ಲಿ ಚಿಕನ್ ಬರ್ಗರ್ ತಿನ್ನುವ ರಶ್ಮಿಕಾ ಮಂದಣ್ಣ ಅವರ ವಿಡಿಯೋವೊಂದನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ಬಾಲಿವುಡ್ ಗರಿಮಾ ಕುಮಾರ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿದ ನಂತರ ಈ ಬೆಳವಣಿಗೆಯಾಗಿದೆ. ಈ ಫೋಸ್ಟ್ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದು, ರಶ್ಮಿಕಾ ಮಂದಣ್ಣ ಈ ಹಿಂದೆ ನೀಡಿದ್ದ ಹೇಳಿಕೆ ಸುಳ್ಳಾ? ಎಂದು ಪ್ರಶ್ನಿಸುತ್ತಿದ್ದಾರೆ. 

ಇದು ವಿವಾದವಾಗುತ್ತಿದ್ದಂತೆಯೇ  ಮ್ಯಾಕ್ ಡೊನಾಲ್ಡ್ ಕಂಪನಿ  ತನ್ನ ಸಾಮಾಜಿಕ ಮಾಧ್ಯಮಗಳ ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಿದೆ."ರಶ್ಮಿಕಾ ಯಾವಾಗಲೂ ತನ್ನ ಹಲ್ಲುಗಳ ಮೂಲಕ ಸುಳ್ಳು ಹೇಳುತ್ತಾಳೆ ಎಂದು ಬಳಕೆದಾರರೊಬ್ಬರು ವಾಗ್ದಾಳಿ ನಡೆಸಿದ್ದರೆ, ಮತ್ತೋರ್ವ ನೆಟ್ಟಿಗರು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ಬಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com