Gold rate today: ವಾರಾಂತ್ಯದಲ್ಲಿ ಸ್ಥಿರವಾಗಿದ್ದ ಚಿನ್ನದ ದರ ಮತ್ತೆ ಏರುಮುಖ, ಇಲ್ಲಿದೆ ಹೊಸ ಮಾಹಿತಿ

ಮುಂಬೈ: ಯುಗಾದಿ ಹಬ್ಬದ ಬಳಿಕ ವಾರಾಂತ್ಯದಲ್ಲಿ ಸ್ಥಿರವಾಗಿದ್ದ ಚಿನ್ನದ ದರ ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ಚಿನ್ನದ ಬೆಲೆ ಏರಿಕೆ ದಾಖಲಿಸಿದೆ.
ಹೌದು.. ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಮಂಗಳವಾರ ಮತ್ತೆ ದರ ಏರಿಕೆ ದಾಖಲಿಸಿದ್ದು, 10 ಗ್ರಾಂ ಚಿನ್ನದ ದರದಲ್ಲಿ 91 ರೂ ಏರಿಕೆಯಾಗಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಆದರೆ, ಕಳೆದ ಭಾನುವಾರದಿಂದ ಸತತವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇಂದು ಚಿನ್ನದ ದರ ಮತ್ತೆ ಏರಿಕೆಯಾಗಿದ್ದು, 22 ಕ್ಯಾರಟ್ ಚಿನ್ನದ ದರ ಪ್ರತೀ ಗ್ರಾಂಗೆ 90 ರೂ ಏರಿಕೆಯಾಗಿ 6,795ರೂಗೆ ಏರಿಕೆಯಾಗಿದೆ. ಅಂತೆಯೇ 24 ಕ್ಯಾರೆಟ್ ಚಿನ್ನದ ಪ್ರತೀ ಗ್ರಾಂಗೆ 98 ರೂ ಏರಿಕೆಯಾಗಿ ಪ್ರತೀ ಗ್ರಾಂ ಚಿನ್ನ 7,413ರೂಗೆ ಮಾರಾಟವಾಗುತ್ತಿದೆ.

ಬೆಳ್ಳಿ ದರದಲ್ಲೂ ಏರಿಕೆ
ಅತ್ತ ಚಿನ್ನ ಗಗನಮುಖಿಯಾಗಿದ್ದರೂ ಬೆಳ್ಳಿ ದರಗಳು ಮಾತ್ರ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಯ (Silver rate today) ಬೆಲೆಯಲ್ಲಿ 10ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರ 84.75ನಷ್ಟಿದೆ
Silver rate today

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



