'ಸಾಫ್ಟ್ ವೇರ್ ಮಾಹಿತಿ ಕಳ್ಳತನ': ಇನ್ಫೋಸಿಸ್ ವಿರುದ್ಧ Cognizant ಮೊಕದ್ದಮೆ; ಆರೋಪ ತಳ್ಳಿ ಹಾಕಿದ Infosys

'ಆರೋಗ್ಯ ರಕ್ಷಣೆ ವಿಮಾ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ವ್ಯಾಪಾರ ರಹಸ್ಯಗಳು ಮತ್ತು ಮಾಹಿತಿಯನ್ನು ಇನ್ಫೋಸಿಸ್ ಕದಿಯುತ್ತಿದೆ ಎಂದು ಆರೋಪಿಸಿ TriZetto ಅಮೆರಿಕ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ.
Cognizant files lawsuit against Infosys
ಕಾಗ್ನಿಜೆಂಟ್ ಮತ್ತು ಇನ್ಫೋಸಿಸ್
Updated on

ನವದೆಹಲಿ: ಭಾರತದ ಟೆಕ್ ದೈತ್ಯ ಇನ್ಫೋಸಿಸ್ ವಿರುದ್ಧ 'ಸಾಫ್ಟ್ ವೇರ್ ಮಾಹಿತಿ ಕಳ್ಳತನ'ದ ಗಂಭೀರ ಆರೋಪ ಕೇಳಿಬಂದಿದ್ದು, ಐಟಿ ಪ್ರಮುಖ ಕಾಗ್ನಿಜೆಂಟ್‌ನ ಅಂಗಸಂಸ್ಥೆ ಟ್ರಿಜೆಟ್ಟೊ ಇನ್ಫೋಸಿಸ್ ವಿರುದ್ದ ಮೊಕದ್ದಮೆ ಹೂಡಿದೆ.

'ಆರೋಗ್ಯ ರಕ್ಷಣೆ ವಿಮಾ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ವ್ಯಾಪಾರ ರಹಸ್ಯಗಳು ಮತ್ತು ಮಾಹಿತಿಯನ್ನು ಇನ್ಫೋಸಿಸ್ ಕದಿಯುತ್ತಿದೆ ಎಂದು ಆರೋಪಿಸಿ TriZetto ಅಮೆರಿಕ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇನ್ಫೋಸಿಸ್ ತನ್ನ ಸಂಸ್ಥೆಯ ಆರೋಗ್ಯ ರಕ್ಷಣೆ ವಿಮಾ ಸಾಫ್ಟ್‌ವೇರ್‌ಗೆ ಸಂಬಂಧಿಸಿದ ವ್ಯಾಪಾರ ರಹಸ್ಯಗಳು ಮತ್ತು ಮಾಹಿತಿಯನ್ನು ಕದಿಯುತ್ತಿದೆ ಎಂದು ಆರೋಪಿಸಿದೆ.

ಟೆಕ್ಸಾಸ್ ಫೆಡರಲ್ ನ್ಯಾಯಾಲಯದಲ್ಲಿ ಈ ಮೊಕದ್ದಮೆ ದಾಖಲಾಗಿದ್ದು, ಇನ್ಫೋಸಿಸ್ ತನ್ನ ಟ್ರೈಝೆಟ್ಟೊ ಸಾಫ್ಟ್‌ವೇರ್ ಫ್ಯಾಸೆಟ್ಸ್ ಮತ್ತು ಕ್ಯೂಎನ್‌ಎಕ್ಸ್‌ಟಿ-ಯಿಂದ ಅಕ್ರಮವಾಗಿ ಡೇಟಾವನ್ನು ಪ್ರವೇಶಿಸುತ್ತಿದೆ ಮತ್ತು ಸ್ಪರ್ಧಾತ್ಮಕ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಮತ್ತು ಮಾರಾಟ ಮಾಡಲು ಬಳಸುತ್ತಿದೆ ಎಂದು ಆರೋಪಿಸಿದೆ. ಈ ಸಾಫ್ಟ್ ವೇರ್ ಅನ್ನು ಆರೋಗ್ಯ ವಿಮಾ ಸಂಸ್ಥೆಗಳ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಬಳಸುತ್ತವೆ ಎನ್ನಲಾಗಿದೆ. ನ್ಯೂಜೆರ್ಸಿ ಮೂಲದ ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ.

Infosys ತನ್ನ ಡೇಟಾವನ್ನು Infosys ಉತ್ಪನ್ನಕ್ಕೆ ಮರು ಪ್ಯಾಕೇಜ್ ಮಾಡಿದ "Test Cases for Facets" ಅನ್ನು ರಚಿಸಲು ಟ್ರೈಝೆಟ್ಟೊದ ಸಾಫ್ಟ್‌ವೇರ್ ಅನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕಾಗ್ನಿಜೆಂಟ್ ವರದಿ ಮಾಡಿದೆ. ಇದಲ್ಲದೆ, ಕ್ಯೂಎನ್‌ಎಕ್ಸ್‌ಟಿಯಿಂದ ದತ್ತಾಂಶವನ್ನು ಹೊರತೆಗೆಯಲು ಇನ್ಫೋಸಿಸ್ ಸಾಫ್ಟ್‌ವೇರ್ ಅನ್ನು ರಚಿಸಿದ್ದು, ಇದು ಗೌಪ್ಯ ಟ್ರೈಜೆಟ್ಟೊ ಮಾಹಿತಿಯನ್ನು ಕೂಡ ಒಳಗೊಂಡಿದೆ ಎಂದು ಅದು ಆರೋಪಿಸಿದೆ.

Cognizant files lawsuit against Infosys
GST ವಂಚನೆ ಆರೋಪ: Infosys'ಗೆ ನೀಡಿದ್ದ ನೋಟಿಸ್ ವಾಪಸ್, DGGIಗೆ ಉತ್ತರ ನೀಡುವಂತೆ ಸೂಚನೆ!

ಆರೋಪ ನಿರಾಕರಿಸಿದ Infosys

ಇನ್ನು ಕಾಗ್ನಿಜೆಂಟ್ ಆರೋಪಗಳನ್ನು ಇನ್ಫೋಸಿಸ್ ನಿರಾಕರಿಸಿದ್ದು, ಮೊಕದ್ದಮೆಯ ಬಗ್ಗೆ ತಿಳಿದಿದೆ ಮತ್ತು ನ್ಯಾಯಾಲಯದಲ್ಲಿ ತನ್ನ ಸ್ಥಾನವನ್ನು ಸಮರ್ಥಿಸಿಕೊಳ್ಳುತ್ತದೆ ಎಂದು ಪ್ರತಿಪಾದಿಸಿದೆ.

ಅಂದಹಾಗೆ ನಾಸ್ಕಾಮ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ರಾಜೇಶ್ ನಂಬಿಯಾರ್ ಅವರ ರಾಜೀನಾಮೆಯ ನಂತರ, ಕಾಗ್ನಿಜೆಂಟ್ ಈ ವಾರವಷ್ಟೇ, ಇನ್ಫೋಸಿಸ್ ಮಾಜಿ ಕಾರ್ಯನಿರ್ವಾಹಕ ರಾಜೇಶ್ ವಾರಿಯರ್ ಅವರನ್ನು ಜಾಗತಿಕ ಕಾರ್ಯಾಚರಣೆಯ ಮುಖ್ಯಸ್ಥರನ್ನಾಗಿ ಮತ್ತು ಭಾರತದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿತ್ತು.

ಇದಲ್ಲದೆ, ಕಾಗ್ನಿಜೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಎಸ್ ಕೂಡ ಇನ್ಫೋಸಿಸ್ ಸಂಸ್ಥೆಯಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಬೆಂಗಳೂರು ಮೂಲದ ಸಂಸ್ಥೆಯಲ್ಲಿ ಅವರ 20 ವರ್ಷಗಳ ವೃತ್ತಿಜೀವನವು ಜನವರಿ 2016 ರಿಂದ ಅಕ್ಟೋಬರ್ 2022 ರವರೆಗೆ ಅಧ್ಯಕ್ಷರಾಗಿಯೂ ಸೇರಿದಂತೆ ವಿವಿಧ ನಾಯಕತ್ವದ ಪಾತ್ರಗಳನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com