
ನವದೆಹಲಿ: ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ವರ್ಷಕ್ಕೆ ಉದ್ಯೋಗಿಗಳ ಆರೋಗ್ಯ ತೆರಿಗೆಯನ್ನು ಕಡಿಮೆ ಪಾವತಿಸಿದ ಆರೋಪದಲ್ಲಿ ಐಟಿ ಕಂಪನಿ ಇನ್ಫೋಸಿಸ್‌ಗೆ ಕೆನಡಾ ಸರ್ಕಾರ1.34 ಲಕ್ಷ ಕೆನಡಿಯನ್ ಡಾಲರ್ (ಸುಮಾರು 82 ಲಕ್ಷ ರೂ.) ದಂಡವನ್ನು ವಿಧಿಸಿದೆ.
ಈ ಸಂಬಂಧ ಇನ್ಫೋಸಿಸ್ ಮೇ 9 ರಂದು ಕೆನಡಾದ ಹಣಕಾಸು ಸಚಿವಾಲಯದಿಂದ ಆದೇಶವನ್ನು ಸ್ವೀಕರಿಸಿದೆ. 'ಡಿಸೆಂಬರ್ 31, 2020 ಕ್ಕೆ ಕೊನೆಗೊಂಡ ವರ್ಷಕ್ಕೆ ಉದ್ಯೋಗಿಗಳ ಆರೋಗ್ಯ ತೆರಿಗೆಯನ್ನು ಕಡಿಮೆ ಪಾವತಿಸಿದ ಆರೋಪದ ಮೇಲೆ ದಂಡ ವಿಧಿಸಲಾಗಿದೆ' ಎಂದು ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಲಾಗಿದೆ. ಅದರಲ್ಲಿ 1,34,822.38 ಕೆನಡಿಯನ್ ಡಾಲರ್‌ಗಳ ದಂಡವನ್ನು ಉಲ್ಲೇಖಿಸಿದೆ.
ಇದು ಕಂಪನಿಯ ಹಣಕಾಸು, ಕಾರ್ಯಾಚರಣೆ ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇನ್ಫೋಸಿಸ್ ಹೇಳಿದೆ.
Advertisement