ಮುಂಬೈ: ಸತತ ಕುಸಿತದ ಹಾದಿಯಲ್ಲಿ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಸೋಮವಾರವೂ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಸೆನ್ಸೆಕ್ಸ್ 241.30 ಅಂಕ ಕುಸಿತಗೊಂಡಿದೆ.
ಕಳೆದೊಂದು ವಾರದಿಂದ ಸತತ ಕುಸಿತದ ಹಾದಿಯಲ್ಲಿ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಸೋಮವಾರ ಕೂಡ ಕುಸಿದಿದ್ದು, ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 241.30 ಅಂಕಗಳ ಕುಸಿತದೊಂದಿಗೆ 77,339.01 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 78.90 ಅಂಕ ಕುಸಿದಿದ್ದು, 23,453.80 ಅಂಕಗಳಿಗೆ ಕುಸಿದಿದೆ.
ಭಾರತೀಯ ಷೇರುಮಾರುಕಟ್ಟೆ ಇಂದು ಶೇ.0.31ರಿಂದ ಶೇ.0.34ರವರೆಗೂ ಕುಸಿದಿದೆ. ಸೆನ್ಸೆಕ್ಸ್ ಇಂದು ಶೇ.0.31ರಷ್ಟು ಅಂದರೆ, 241.30 ಅಂಕಗಳ ಕುಸಿತದೊಂದಿಗೆ 77,339.01 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಚಿ ಶೇ.0.34ರಷ್ಟು ಕುಸಿತದೊಂದಿಗೆ 78.90 ಅಂಕಗಳ ಕುಸಿತ ಕಂಡು 23,453.80 ಅಂಕಗಳಿಗೆ ಕುಸಿದಿದೆ.
ವಲಯದ ಸೂಚ್ಯಂಕಗಳಲ್ಲಿ, ನಿಫ್ಟಿ ಐಟಿ, ಮಾಧ್ಯಮ; ಮತ್ತು ತೈಲ ಮತ್ತು ಅನಿಲ ವಿಭಾಗ ಷೇರುಗಳು ವ್ಯಾಪಕ ನಷ್ಟ ಅನುಭವಿಸಿದ್ದು, ಲೋಹ, ಪಿಎಸ್‌ಯು ಬ್ಯಾಂಕ್ ಮತ್ತು ರಿಯಾಲ್ಟಿ ಸೆಕ್ಟರ್ ನ ಷೇರುಗಳ ಮೌಲ್ಯದಲ್ಲಿ ಬದಲಾವಣೆ ಕಂಡುಬಂದಿದೆ.
ಮಾರುಕಟ್ಟೆಯಲ್ಲಿ ಬಲವರ್ಧನೆ ಮುಂದುವರೆಯಿತು; ಗಳಿಕೆಯ ಬೆಳವಣಿಗೆಯಲ್ಲಿನ ಕುಸಿತ ಮತ್ತು ಹಣದುಬ್ಬರದಿಂದಾಗಿ ದುರ್ಬಲವಾದ ರೂಪಾಯಿಯು ಭಾವನೆಯ ಮೇಲೆ ಪ್ರಭಾವ ಬೀರಿತು ಎನ್ನಲಾಗಿದೆ. ಇದಲ್ಲದೆ ಡಿಸೆಂಬರ್‌ನಲ್ಲಿ ಎಫ್‌ಇಡಿ ದರ ಕಡಿತದ ನಿರೀಕ್ಷೆಯಿಂದಾಗಿ ಐಟಿ ಷೇರುಗಳು ಇಂದು ಋಣಾತ್ಮಕವಾಗಿ ವಹಿವಾಟು ನಡೆಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ 30 ಸಂಸ್ಥೆಗಳ ಪೈಕಿ ಟಿಸಿಎಸ್, ಇನ್ಫೋಸಿಸ್, ಎನ್‌ಟಿಪಿಸಿ, ಟೆಕ್ ಮಹೀಂದ್ರ, ಎಚ್‌ಸಿಎಲ್‌ಟೆಕ್, ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದ್ದು, ಅಂತೆಯೇ ಟಾಟಾ ಸ್ಟೀಲ್, ಎಚ್‌ಯುಎಲ್, ಎಂ & ಎಂ, ನೆಸ್ಲೆ, ಎಸ್‌ಬಿಐ, ಅದಾನಿ ಪೋರ್ಟ್ಸ್ ಲಾಭಾಂಶ ಗಳಿಸಿದವು.
Advertisement