ಮುಂಬೈ: ಅದಾನಿ ಸಂಸ್ಥೆ ಕುರಿತ ವಿವಾದದ ಬಳಿಕ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ವಾರಾಂತ್ಯದ ದಿನವಾದ ಶುಕ್ರವಾರ ಭರ್ಜರಿ ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.91 ರಿಂದ ಶೇ.0.96ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 759.05 ಅಂಕಗಳ ಏರಿಕೆಯೊಂದಿಗೆ 79,802.79 ಅಂಕಗಳಿಗೆ ಏರಿಕೆಯಾಗಿದೆ.
ಅಂತೆಯೇ ನಿಫ್ಟಿ ಕೂಡ 216.95 ಅಂಕಗಳ ಏರಿಕೆಯೊಂದಿಗೆ 24,131.10 ಅಂಕಗಳಿಗೆ ಏರಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್ಟೆಲ್ ರಿಲಯನ್ಸ್ ಸಂಸ್ಥೆಗಳ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರ್ತಿ ಏರ್ಟೆಲ್ ಸಂಸ್ಥೆಯ ಷೇರು ಮೌಲ್ಯ ಬರೊಬ್ಬರಿ ಶೇ.4.40ರಷ್ಟು ಅಂದರೆ 68.60 ರೂನಷ್ಟು ಏರಿಕೆಯಾಗಿ 1,629ರೂಗೆ ಏರಿಕೆಯಾಗಿದೆ. ಅಂತೆಯೇ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಶೇ.1.63ರಷ್ಟು ಏರಿಕೆಯಾಗಿ 20.70 ರೂ ಏರಿ 1,291.50ಗೆ ತಲುಪಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಭಾರ್ತಿ ಏರ್‌ಟೆಲ್, ಮಹೀಂದ್ರಾ ಮತ್ತು ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಪೋರ್ಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸನ್ & ಟೂಬ್ರೋ, JSW ಸ್ಟೀಲ್, ಹಿಂದೂಸ್ತಾನ್ ಯೂನಿಲಿವರ್, ಟೈಟಾನ್ ಮತ್ತು ಟಾಟಾ ಮೋಟಾರ್ಸ್ ಲಾಭಾಂಶ ಗಳಿಸಿದರೆ, ಪವರ್ ಗ್ರಿಡ್, ನೆಸ್ಲೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇನ್ಫೋಸಿಸ್ ಸಂಸ್ಥೆಗಳ ಷೇರುಗಳು ನಷ್ಟ ಅನುಭವಿಸಿದವು.
Advertisement