ಮುಂಬೈ: ಸತತ ಕುಸಿತದ ಹಾದಿಯಲ್ಲಿರುವ ಭಾರತೀಯ ಷೇರುಮಾರುಕಟ್ಟೆ 4ನೇ ದಿನವೂ ಅಲ್ಪ ಪ್ರಮಾಣ ಕುಸಿತಕಂಡಿದ್ದು, ಇಂದು ಸೆನ್ಸೆಕ್ಸ್ 16 ಅಂಕ ಇಳಿಕೆಯಾಗಿದೆ.
ಇಂದು ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 16.82 ಅಂಕಗಳನ್ನು ಕಳೆದುಕೊಂಡಿದ್ದು, ದಿನದ ವಹಿವಾಟು ಅಂತ್ಯಕ್ಕೆ 80,065.16 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಟಿ ಕೂಡ 36.10 ಅಂಕಗಳ ಕುಸಿತಕಂಡಿದ್ದು, 24,399.40 ಅಂಕಗಳಿಗೆ ಕುಸಿದಿದೆ.
ಇಂದು ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶೇ.0.021ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ0.15ರಷ್ಟು ಕುಸಿದಿದೆ.
ಇಂದಿನ ವಹಿವಾಟಿನಲ್ಲಿ auto ಮತ್ತು IT ವಲಯದ ಷೇರುಗಳು ಹೆಚ್ಚು ಮಾರಾಟವಾಗಿದ್ದು, Hindustan Unilever Ltd ಸಂಸ್ಥೆ ಹೆಚ್ಚಿನ ನಷ್ಟ ಕಂಡಿದೆ. ಇದಲ್ಲದೆ ಎಂಸಿಜಿ, ಮೆಟಲ್, ರಿಯಲ್ ಎಸ್ಟೇಟ್ ಮತ್ತು ಮಾಧ್ಯಮ ವಲಯದ ಷೇರುಗಳು ಹೆಚ್ಚಿನ ಮಾರಾಟ ಕಂಡಿವೆ. ಬ್ಯಾಂಕಿಂಗ್, ಫೈನಾನ್ಸ್, ಫಾರ್ಮಾ, ಇಂಧನ, ಖಾಸಗಿ ಬ್ಯಾಂಕ್, ಮೂಲಭೂತ ಸೌಕರ್ಯ ವಲಯದ ಷೇರುಗಳ ಖರೀದಿ ಹೆಚ್ಚಾಗಿತ್ತು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಉಳಿದಂತೆ ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಪೈಕಿ ಅಲ್ಟ್ರಾಟೆಕ್ ಸಿಮೆಂಟ್, M&M, ಟೈಟಾನ್, ಅದಾನಿ ಪೋರ್ಟ್ಸ್, SBI, ಬಜಾಜ್ ಫೈನಾನ್ಸ್, ಪವರ್‌ಗ್ರಿಡ್, HDFC ಬ್ಯಾಂಕ್, NTPC ಮತ್ತು ಸನ್ ಫಾರ್ಮಾ ಸಂಸ್ಥೆಗಳ ಷೇರುಗಳು ಲಾಭಾಂಶ ಕಂಡಿದ್ದು, ಅಂತೆಯೇ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ನೆಸ್ಲೆ ಇಂಡಿಯಾ, ITC, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
ಇತ್ತ ನಿಫ್ಟಿ ಪ್ಯಾಕ್ ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಶ್ರೀರಾಮ್ ಫೈನಾನ್ಸ್, M&M, ಗ್ರಾಸಿಮ್, ಟೈಟಾನ್, ಅದಾನಿ ಪೋರ್ಟ್ಸ್, BEL, SBI, ಬಜಾಜ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಲಾಭಾಂಶ ಕಂಡಿದ್ದು, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಸ್‌ಬಿಐ ಲೈಫ್, ಹಿಂಡಾಲ್ಕೊ, ನೆಸ್ಲೆ ಇಂಡಿಯಾ, ಬಜಾಜ್ ಆಟೋ, ಬ್ರಿಟಾನಿಯಾ ಮತ್ತು ಮಾರುತಿ ಸಂಸ್ಥೆಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.
Advertisement