
ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರೆಯ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಘೋಷಣೆಯಿಂದಾಗಿ ಸೋಮವಾರ ಷೇರು ಮಾರುಕಟ್ಟೆಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತಿದೆ. ಮಾರುಕಟ್ಟೆಯಲ್ಲಿ ಎಲ್ಲೆಡೆ ಕುಸಿತ ಕಂಡುಬಂದಿದೆ. ಇಲ್ಲಿಯವರೆಗೆ ಅಲ್ಪ ಕುಸಿತಗಳನ್ನು ಕಂಡಿದ್ದ ಹೂಡಿಕೆದಾರರು ಸೋಮವಾರದ ಷೇರುಪೇಟೆ ಪತನ ಕಂಡು ದಿಗ್ಭ್ರಾಂತರಾಗಿದ್ದಾರೆ.
ಬಿಎಸ್‌ಇ ಸೆನ್ಸೆಕ್ಸ್ 4000 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದರೆ, 1,160 ಅಂಕಗಳಷ್ಟು ನಷ್ಟದೊಂದಿಗೆ ದಿನದ ವಹಿವಾಟು ಶುರು ಮಾಡಿದೆ. ಈ ಮೂಲಕ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ವಾರಾಂತ್ಯದ ರಜಾದಿನಗಳ ನಂತರ ಸೋಮವಾರ ಬೆಳಿಗ್ಗೆ 9 ಗಂಟೆಗೆ ವಹಿವಾಟು ಪುನರಾರಂಭವಾದಾಗ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 3, 939.68 ಅಂಕ ಕುಸಿತ ಕಂಡು 71,425.01ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ನಿಫ್ಟಿ 50ಯು 1,160.8 ಅಂಕಗಳ ಕುಸಿತದೊಂದಿಗೆ 21,743.65ಕ್ಕೆ ತಲುಪಿತು.
ಸದ್ಯ 9.54ರ ವೇಳೆಗೆ ಸೆನ್ಸೆಕ್ಸ್ 2,657.71 ಅಂಕ ಅಥವಾ ಶೇ. 3.53ರಷ್ಟು ಕುಸಿತ ಕಂಡಿದ್ದು, 72,706.98ರಲ್ಲಿ ವಹಿವಾಟು ಮುಂದುವರಿಸಿದೆ.ನಿಫ್ಟಿ 50ಯು 872.55 ಅಂಕ ಅಥವಾ ಶೇ. 3.81ರಷ್ಟು ಇಳಿಕೆ ಕಂಡು 22,031.90ರಲ್ಲಿ ವಹಿವಾಟು ನಡೆಸುತ್ತಿದೆ.
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಾಪಾರ ಸುಂಕಗಳನ್ನು ವಿಧಿಸುವ ಸಾಧ್ಯತೆಯನ್ನು ಸಹ ಷೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವೆಂದು ಪರಿಗಣಿಸಲಾಗುತ್ತಿದೆ. ಟ್ರಂಪ್ 2.0ನಲ್ಲಿ ಆರ್ಥಿಕ ನಿರ್ಧಾರಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಕೆನಡಾ ಮತ್ತು ಮೆಕ್ಸಿಕೊ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವ ಸಾಧ್ಯತೆಯ ಸುಳಿವು ಸುಂಕ ಹೆಚ್ಚಳ ನೀತಿಯನ್ನು ಕ್ರಮೇಣ ಜಾರಿಗೆ ತರಲಾಗುವುದು ಎಂದು ಸೂಚಿಸುತ್ತದೆ.
Advertisement