Indian Stock Market: ವಾರದ ಮೊದಲ ದಿನವೇ Sensex ಏರಿಕೆ, 24 ಸಾವಿರ ಅಂಕ ಗಡಿ ದಾಟಿದ Nifty50

ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Indian Stock Market
ಭಾರತೀಯ ಷೇರು ಮಾರುಕಟ್ಟೆ
Updated on

ಮುಂಬೈ: ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ಚೇತೋಹಾರಿ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.09ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.15ರಷ್ಟು ಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 855.30ಅಂಕಗಳ ಏರಿಕೆಯೊಂದಿಗೆ 79,408.50 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 273.90 ಅಂಕಗಳ ಏರಿಕೆಯೊಂದಿಗೆ 24,125.55 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market
ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ: 1 ಲಕ್ಷ ರೂ ಆಸುಪಾಸಿನಲ್ಲಿ 10 ಗ್ರಾಂ ಚಿನ್ನ; ಬೆಂಗಳೂರಿನಲ್ಲಿ ಇಂದಿನ ಬೆಲೆ!

ಸತತ 5ನೇ ದಿನ ಏರಿಕೆ!

ಕಳೆದ ಮಂಗಳವಾರ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಅಂದಿನಿಂದ ಸತತವಾಗಿ ಏರುಗತಿಯಲ್ಲೇ ಸಾಗಿದೆ. ಕಳೆದು ಶುಕ್ರವಾರವೂ ಕೂಡ ವಾರಾಂತ್ಯದ ವಹಿವಾಟಿನಲ್ಲಿ ಗ್ರೀನ್ ನಲ್ಲೇ ಅಂತ್ಯಗೊಂಡಿತ್ತು. ಇದೀಗ ಸೋಮವಾರವೂ ಕೂಡ ಷೇರುಮಾರುಕಟ್ಟೆ ಗ್ರೀನ್ ನಲ್ಲೇ ಅಂತ್ಯಕಾಣುವ ಮೂಲಕ ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ. ಇಂದಿನ ವಹಿವಾಟಿನಲ್ಲಿ ಐಟಿ, ಮತ್ತು ಬ್ಯಾಕಿಂಗ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಬಜಾಜ್ ಫಿನ್‌ಸರ್ವ್, ಮಹೀಂದ್ರಾ & ಮಹೀಂದ್ರಾ, ಎಚ್‌ಸಿಎಲ್ ಟೆಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಅದಾನಿ ಪೋರ್ಟ್ಸ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ, ಏಷ್ಯನ್ ಪೇಂಟ್ಸ್ ಮತ್ತು ನೆಸ್ಲೆ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com