Crude oil supply: ಅಗ್ರ ಸ್ಥಾನದಲ್ಲಿ ರಷ್ಯಾ, ಟಾಪ್ 5 ರಲ್ಲಿ ಆಫ್ರಿಕನ್ ದೇಶ ಅಂಗೋಲಾ; ಅಮೆರಿಕಾ ಪಾಲು ಎಷ್ಟು?

ಈ ಹಿಂದೆ ದೇಶದ ಪ್ರಮುಖ ಕಚ್ಚಾತೈಲ ಪೂರೈಕೆ ರಾಷ್ಟ್ರವಾಗಿದ್ದ ಅಮೆರಿಕ ಇದೀಗ ಭಾರತಕ್ಕೆ ತೈಲ ಪೂರೈಸುವ 5 ಪ್ರಮುಖ ದೇಶಗಳ ಪಟ್ಟಿಯಿಂದ ಹೊರಗುಳಿದಿದೆ.
India inks Pact with Iran to pay crude bill in rupee
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕಚ್ಚಾ ತೈಲ ಪೂರೈಕೆ ವಿಚಾರದಲ್ಲಿ ಅಮೆರಿಕದ ಬೆದರಿಕೆ ತಂತ್ರಗಾರಿಕೆಯ ಹೊರತಾಗಿಯೂ ಭಾರತ ರಷ್ಯಾದಿಂದ ತನ್ನ ತೈಲ ಆಮದು ಮುಂದುವರೆಸಿದ್ದು, ಪರಿಣಾಮ ಇದೀಗ ಭಾರತದ ಪ್ರಮುಖ ತೈಲ ಪೂರೈಕೆದಾರ ಎಂಬ ಪಟ್ಟಿಗೆ ಇದೀಗ ರಷ್ಯಾ ಪಾತ್ರವಾಗಿದೆ.

ಹೌದು.. ಡಿಸೆಂಬರ್‌ನಲ್ಲಿ ಅಮೆರಿಕವನ್ನು ಹಿಂದಿಕ್ಕಿ ಆಫ್ರಿಕನ್ ರಾಷ್ಟ್ರ ಅಂಗೋಲಾ ಮುನ್ನಡೆ ಸಾಧಿಸಿದ್ದು, ಈ ಹಿಂದೆ ದೇಶದ ಪ್ರಮುಖ ಕಚ್ಚಾತೈಲ ಪೂರೈಕೆ ರಾಷ್ಟ್ರವಾಗಿದ್ದ ಅಮೆರಿಕ ಇದೀಗ ಭಾರತಕ್ಕೆ ತೈಲ ಪೂರೈಸುವ ಐದು ಪ್ರಮುಖ ದೇಶಗಳ ಪಟ್ಟಿಯಿಂದ ಹೊರಗುಳಿದಿದೆ. ರಷ್ಯಾದ ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆಯಾದರೂ ರಷ್ಯಾ ಭಾರತಕ್ಕೆ ತೈಲ ಪೂರೈಸುವ ಪ್ರಮುಖ ಪೂರೈಕೆದಾರರಾಗಿ ಮುಂದುವರೆದಿದೆ.

ಇಂಧನ ಸರಕು ಟ್ರ್ಯಾಕಿಂಗ್ ಸಂಸ್ಥೆ ವೋರ್ಟೆಕ್ಸಾ ಪ್ರಕಾರ, 'ರಷ್ಯಾದ ಕಚ್ಚಾ ತೈಲ ಭಾರತದ ಒಟ್ಟಾರೆ ಆಮದು ಪ್ರಮಾಣದಲ್ಲಿ ಶೇ.31% ರಷ್ಟಿದೆ. ಇದು ವರ್ಷದ ಅತ್ಯಂತ ಕಡಿಮೆ ಪಾಲು, ಆದರೆ ಇದೇ ಪಟ್ಟಿಯಲ್ಲಿ ಅಮೆರಿಕ ಕೇವಲ 1% ರಷ್ಟಿದೆ ಎಂದು ಹೇಳಿದೆ.

ರಷ್ಯಾದ ರಿಯಾಯಿತಿಗಳು ಕಡಿಮೆಯಾಗುವುದರಿಂದ ಭಾರತದ ಕಚ್ಚಾತೈಲ ಆಮದು ಪ್ರಮಾಣ ಕಡಿಮೆಯಾಗುತ್ತಿದ್ದು, ಇದು ಸತತ ಎರಡನೇ ತಿಂಗಳಿನಿಂದ ರಷ್ಯಾದ ಆಮದು ಕುಸಿಯುತ್ತಿದೆ. ಏತನ್ಮಧ್ಯೆ, ಭಾರತದ ಅಗ್ರ ಐದು ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರಗಳ ಪಟ್ಟಿಯಿಂದ ಅಮೆರಿಕ ಹೊರಬಿದ್ದಿದೆ. ಆಫ್ರಿಕನ್ ರಾಷ್ಟ್ರ ಅಂಗೋಲಾ ಈ ಪಟ್ಟಿಗೆ ಸೇರ್ಪಡೆಯಾಗಿದ್ದು, ಐದನೇ ಸ್ಥಾನಕ್ಕೆ ತಲುಪಿದೆ. ಇತ್ತೀಚೆಗೆ (ಆಗಸ್ಟ್ 2024 ರಲ್ಲಿ), ಭಾರತದ ಕಚ್ಚಾ ತೈಲ ಆಮದುಗಳಲ್ಲಿ ಅಮೆರಿಕದ ಪಾಲು 8% ರಷ್ಟಿತ್ತು.

India inks Pact with Iran to pay crude bill in rupee
ರಾಜ್ಯಸಭೆ: ರಷ್ಯಾ ತೈಲ ಆಮದು ವಿಚಾರ, ಟಿಎಂಸಿ ಸಂಸದ, ಕೇಂದ್ರ ಸಚಿವ ಪುರಿ ನಡುವೆ ಮಾತಿನ ಚಕಮಕಿ

“ಡಿಸೆಂಬರ್ 2024 ರಲ್ಲಿ, ಅಗ್ರ ಐದು ಪೂರೈಕೆದಾರ ರಾಷ್ಟ್ರಗಳ ಪೈಕಿ ರಷ್ಯಾ ಅಗ್ರಸ್ಥಾನದಲ್ಲಿದ್ದು, ಇರಾಕ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಂಗೋಲಾ ನಂತರದ ಸ್ಥಾನಗಳಲ್ಲಿವೆ. ಅಂಗೋಲಾ ಐದನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿ ಅಮೆರಿಕವನ್ನು ಹಿಂದಿಕ್ಕಿದೆ.

ರಷ್ಯಾದ ಕಚ್ಚಾ ತೈಲ ರಫ್ತು ಕುಸಿದಂತೆ ಭಾರತೀಯ ಸಂಸ್ಕರಣಾಗಾರರು ಕಚ್ಚಾ ತೈಲಕ್ಕಾಗಿ ಆಫ್ರಿಕನ್ ಮತ್ತು ಮಧ್ಯಪ್ರಾಚ್ಯ ಉತ್ಪಾದಕರ ಕಡೆಗೆ ತಿರುಗಿದ್ದಾರೆ. "ಭಾರತದ ಕಚ್ಚಾ ತೈಲ ಆಮದು ವರ್ಷದಿಂದ ವರ್ಷಕ್ಕೆ 2% ರಷ್ಟು ಹೆಚ್ಚಾಗಿದ್ದು, 2024 ರಲ್ಲಿ 4.57mbd ಗೆ ತಲುಪಿದೆ" ಎಂದು ವೋರ್ಟೆಕ್ಸಾದ ಮಾರುಕಟ್ಟೆ ವಿಶ್ಲೇಷಕ ಕ್ಸೇವಿಯರ್ ಟ್ಯಾಂಗ್ ಹೇಳಿದರು. ಆದಾಗ್ಯೂ, ಡಿಸೆಂಬರ್‌ನಲ್ಲಿ ಭಾರತದ ಒಟ್ಟಾರೆ ಕಚ್ಚಾ ತೈಲ ಆಮದು ದಿನಕ್ಕೆ 4.46 ಮಿಲಿಯನ್ ಬ್ಯಾರೆಲ್‌ಗೆ 4% ರಷ್ಟು ಹೆಚ್ಚಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

India inks Pact with Iran to pay crude bill in rupee
ಅಮೆರಿಕ ನಿರ್ಬಂಧದ ಹೊರತಾಗಿಯೂ ಇರಾನ್ ತೈಲ ಖರೀದಿ: ಧರ್ಮೇಂದ್ರ ಪ್ರಧಾನ್

ಭಾರತವು ಡಿಸೆಂಬರ್‌ನಲ್ಲಿ ಇರಾಕ್‌ನಿಂದ ಆಮದು ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿತು. ಇದು ನವೆಂಬರ್‌ನಲ್ಲಿ 16% ರಿಂದ 23% ಕ್ಕೆ ಏರಿತು, ಆದರೆ ಸೌದಿ ಅರೇಬಿಯಾ ಮತ್ತು ಯುಎಇಯಿಂದ ಆಮದು ಕ್ರಮವಾಗಿ 13% ಮತ್ತು 10%ಕ್ಕೆ ಇಳಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಷ್ಯಾದ ಕಚ್ಚಾ ತೈಲ ಆಮದು ನವೆಂಬರ್‌ನಲ್ಲಿ 36% ರಿಂದ ಡಿಸೆಂಬರ್‌ನಲ್ಲಿ 31% ಕ್ಕೆ ಇಳಿದಿದೆ. ಒಂದು ಹಂತದಲ್ಲಿ, ಭಾರತವು ತನ್ನ ಪೂರೈಕೆಯ 44% ರಷ್ಟು ರಷ್ಯಾದಿಂದ ಆಮದು ಮಾಡಿಕೊಂಡಿತ್ತು. ರಷ್ಯಾ-ಉಕ್ರೇನ್ ಯುದ್ಧದ ನಂತರ ಭಾರತೀಯ ಸಂಸ್ಕರಣಾಗಾರಗಳಿಂದ ರಷ್ಯಾದ ಕಚ್ಚಾ ತೈಲ ಆಮದುಗಳಲ್ಲಿ ಹೆಚ್ಚಳ ಪ್ರಾರಂಭವಾಯಿತು, ಆಗ ರಷ್ಯಾದ ತೈಲವನ್ನು ಗಮನಾರ್ಹ ರಿಯಾಯಿತಿಯಲ್ಲಿ ನೀಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com