Jio, Airtelಗೆ ಬಿಗ್ ಶಾಕ್! BSNL-Vi ಮೆಗಾ ಡೀಲ್; ಟವರ್, ಫೈಬರ್ ಹಂಚಿಕೆ ಮೂಲಕ ದೇಶಾದ್ಯಂತ ಜಂಟಿ ಸೇವೆ

ಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ಸೆಡ್ಡು ಹೊಡೆಯಲು ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ Vi ಹಾಗೂ ಸರ್ಕಾರಿ ಸ್ವಾಮ್ಯದ BSNL ಒಂದಾಗುತ್ತಿವೆ. ಅದರಂತೆ, ಈ ಎರಡು ಕಂಪನಿಗಳು ಭಾರತದಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ತಮ್ಮ ನೆಟ್‌ವರ್ಕ್ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸಿವೆ.
Vodafone Idea (Vi) and BSNL
BSNL-Vi ಮೆಗಾ ಡೀಲ್!AI Image
Updated on

ನವದೆಹಲಿ: TRAI ಮಾಹಿತಿಯ ಪ್ರಕಾರ, ಭಾರತದಲ್ಲಿ ಸರಾಸರಿ ಪ್ರತಿ 100 ಜನ ಮೊಬೈಲ್ ಬಳಕೆದಾರರಲ್ಲಿ  39 ಜನರು ಜಿಯೋ, 38 ಜನರು ಏರ್‌ಟೆಲ್, ಸುಮಾರು 15 ಜನರು ವೊಡಾಫೋನ್-ಐಡಿಯಾ (Vi) ಹಾಗೂ 7 ಜನರು BSNL ಜೊತೆಗೆ ಉಳಿದ 1 ಅಥವಾ ಅದಕ್ಕಿಂತಲೂ ಕಡಿಮೆ ಜನರು MTNL ಸೇರಿದಂತೆ ಇತ್ಯಾದಿಗಳನ್ನು ಬಳಕೆ ಮಾಡುತ್ತಾರೆ. ಅದರಂತೆ, ಜಿಯೋ ಹಾಗೂ ಏರ್‌ಟೆಲ್ ಒಟ್ಟು ಬಳಕೆದಾರರ ಸಂಖ್ಯೆಯೇ 77 ಎನ್ನಲಾಗಿದೆ. ಅದರಲ್ಲೂ, ಈ ಕಂಪನಿಗಳೇ ಹಚ್ಚಿನ ರೀಚಾರ್ಜ್ ಬೆಲೆಗಳನ್ನ ನಿಗಧಿ ಪಡೆಸುತ್ತಿದ್ದರು. ಆದರೆ, ಈ ಓಟಕ್ಕೆ ಬ್ರೇಕ್ ಹಾಕಲು Vi ಹಾಗೂ BSNL ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ:

ದೇಶವ್ಯಾಪಿ ನೆಟ್‌ವರ್ಕ್ ಹಂಚಿಕೆ ಒಪ್ಪಂದ

ಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ಸೆಡ್ಡು ಹೊಡೆಯಲು ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್-ಐಡಿಯಾ (Vi) ಹಾಗೂ ಸರ್ಕಾರಿ ಸ್ವಾಮ್ಯದ BSNL ಒಂದಾಗುತ್ತಿವೆ. ಅದರಂತೆ, ಈ ಎರಡು ಕಂಪನಿಗಳು ಭಾರತದಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ ತಮ್ಮ ನೆಟ್‌ವರ್ಕ್ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸಿವೆ. ವೊಡಾಫೋನ್ ಐಡಿಯಾ ಸಿಇಒ ಅಭಿಜಿತ್ ಕಿಶೋರ್ ಹಾಗೂ ಬಿಎಸ್‌ಎನ್‌ಎಲ್ ಮುಖ್ಯಸ್ಥ ರಾಬರ್ಟ್ ಜೆ. ರವಿ ನಡುವೆ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ಐತಿಹಾಸಿಕ ತೀರ್ಮಾನ ಹೊರಬಿದ್ದಿದೆ. ಈ ವ್ಯವಸ್ಥೆಯಡಿ ಇಂಟ್ರಾ-ಸರ್ಕಲ್ ಮತ್ತು ಇಂಟರ್-ಸರ್ಕಲ್ ರೋಮಿಂಗ್ ಸೌಲಭ್ಯ ದೊರೆಯಲಿದೆ. ಅದರಂತೆ, ಒಪ್ಪಂದದ ಪ್ರಮುಖ ಅಂಶಗಳು ಹೀಗಿವೆ,

  • ರಾಷ್ಟ್ರವ್ಯಾಪಿ ರೋಮಿಂಗ್ ಸೌಲಭ್ಯ: ಈ ಒಪ್ಪಂದದ ಅನ್ವಯ BSNL ಮತ್ತು Vi ಗ್ರಾಹಕರು ದೇಶದ ಯಾವುದೇ ಭಾಗದಲ್ಲೂ ಪರಸ್ಪರರ ನೆಟ್‌ವರ್ಕ್ ಅನ್ನು ಬಳಸಿಕೊಳ್ಳಬಹುದು. ಅಂದರೆ, BSNL ನೆಟ್‌ವರ್ಕ್ ಇಲ್ಲದ ಕಡೆ Vi ನೆಟ್‌ವರ್ಕ್ ಮತ್ತು Vi ಸಿಗ್ನಲ್ ಇಲ್ಲದ ಗ್ರಾಮೀಣ ಭಾಗಗಳಲ್ಲಿ BSNL ನೆಟ್‌ವರ್ಕ್ ಲಭ್ಯವಾಗಲಿದೆ.

  • ಟವರ್ ಮತ್ತು ಫೈಬರ್ ಹಂಚಿಕೆ: ಎರಡೂ ಕಂಪನಿಗಳು ತಮ್ಮಲ್ಲಿರುವ ಲಕ್ಷಾಂತರ ಟೆಲಿಕಾಂ ಟವರ್‌ಗಳು ಮತ್ತು ಆಪ್ಟಿಕಲ್ ಫೈಬರ್ ಜಾಲವನ್ನು ಜಂಟಿಯಾಗಿ ಬಳಸಿಕೊಳ್ಳಲಿವೆ. ಇದು ಹೊಸದಾಗಿ ಟವರ್‌ಗಳನ್ನು ಸ್ಥಾಪಿಸುವ ಭಾರಿ ವೆಚ್ಚವನ್ನು ಉಳಿಸಲಿದೆ.

  • 4G ಮತ್ತು 5G ಸೇವೆಗಳ ವಿಸ್ತರಣೆ: ಈ ಜಂಟಿ ಮೂಲಸೌಕರ್ಯ ಬಳಕೆಯಿಂದಾಗಿ ದೇಶಾದ್ಯಂತ ವೇಗದ 4G ಮತ್ತು ಮುಂಬರುವ 5G ಸೇವೆಗಳ ರೋಲ್‌ಔಟ್ ಪ್ರಕ್ರಿಯೆ ಇನ್ನುಮುಂದೆ ಜಿಯೋ ಮತ್ತು ಏರ್‌ಟೆಲ್‌ಗೆ ಸರಿಸಮಾನವಾಗಿ ವೇಗವನ್ನು ಪಡೆದುಕೊಳ್ಳಲಿದೆ.

ಜಿಯೋ, ಏರ್‌ಟೆಲ್‌ಗೆ ಪೈಪೋಟಿ ಹೇಗೆ?

ಸದ್ಯ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್ ಸಿಂಹಪಾಲು ಹೊಂದಿವೆ. BSNL ಮತ್ತು Vi ಕಂಪನಿಗಳು ಪ್ರತ್ಯೇಕವಾಗಿ ಹೋರಾಡಲು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದವು. ಈಗ ಈ ಎರಡು ಸಂಸ್ಥೆಗಳು ಒಟ್ಟಾಗಿರುವುದರಿಂದ ಇವರ ಒಟ್ಟು ಟವರ್‌ಗಳು ಮತ್ತು ನೆಟ್‌ವರ್ಕ್ ವ್ಯಾಪ್ತಿ ಜಿಯೋ ಮತ್ತು ಏರ್‌ಟೆಲ್‌ಗೆ ಸಮನಾಗಿ ನಿಲ್ಲುತ್ತದೆ. ಇದರಿಂದಾಗಿ ಗ್ರಾಹಕರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದ ಕಡೆಗಳಲ್ಲಿ ಈಗ ಉತ್ತಮ ಗುಣಮಟ್ಟದ ಕನೆಕ್ಟಿವಿಟಿ ಸಿಗಲಿದ್ದು, ಜಿಯೋ-ಏರ್‌ಟೆಲ್ ಮಾರುಕಟ್ಟೆಗೆ ನೇರ ಪೈಪೋಟಿ ಫಿಕ್ಸ್ ಆಗಿದೆ.

Vodafone Idea (Vi) and BSNL
BSNL ಬಂಪರ್ ಆಫರ್; ಕೇವಲ 51 ರೂಪಾಯಿಗೆ Unlimited ಕಾಲಿಂಗ್ ಜೊತೆಗೆ ದಿನವೂ 2GB ಡೇಟಾ!

ಏತನ್ಮಧ್ಯೆ, ಪ್ರಸ್ತುತ ದೆಹಲಿ ಮತ್ತು ಮುಂಬೈನಲ್ಲಿ BSNL ಮತ್ತು Vi ಕಂಪನಿಗಳ ನಡುವೆ ಇದೇ ಮಾದರಿಯ ವ್ಯವಸ್ಥೆ ಚಾಲ್ತಿಯಲ್ಲಿದೆ. ಅದರಂತೆ, ಇದೀಗ ಆ ಸೌಲಭ್ಯವನ್ನು ಇತರೆ ಟೆಲಿಕಾಂ ವಲಯಗಳಿಗೂ ವಿಸ್ತರಿಸಲಾಗುತ್ತಿದೆ. ಇನ್ನೂ, ವರದಿಗಳ ಪ್ರಕಾರ, BSNL ಈಗಾಗಲೇ ತನ್ನ 1,441ಕ್ಕೂ ಹೆಚ್ಚು ಟವರ್‌ಗಳನ್ನು ವೊಡಾಫೋನ್ ಐಡಿಯಾಗೆ 4G ಮತ್ತು 5G ಸೇವೆಗಳಿಗಾಗಿ ಬಾಡಿಗೆಗೆ ನೀಡಿದೆ.

ಬೆಲೆ ಏರಿಕೆಗೆ ಬೀಳುತ್ತಾ ಲಗಾಮು?

ಇತ್ತೀಚಿನ ವರ್ಷಗಳಲ್ಲಿ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ಪದೇ ಪದೇ ತಮ್ಮ ರಿಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸುತ್ತಾ ಬಂದಿವೆ. ಮಾರುಕಟ್ಟೆಯಲ್ಲಿ ಪೈಪೋಟಿ ಕಡಿಮೆ ಇದ್ದದ್ದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ, ಈಗ BSNLನ ಅಗ್ಗದ ಪ್ಲಾನ್‌ಗಳಿಗೆ Vi ಸಂಸ್ಥೆಯ ಅತ್ಯಾಧುನಿಕ ನೆಟ್‌ವರ್ಕ್ ಬಲ ಸಿಗುವುದರಿಂದ, ಗ್ರಾಹಕರು BSNL ಕಡೆಗೆ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಗ್ರಾಹಕರನ್ನು ಉಳಿಸಿಕೊಳ್ಳಲು ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ತಮ್ಮ ರಿಚಾರ್ಜ್ ದರಗಳನ್ನು ಪದೇ ಪದೇ ಹೆಚ್ಚಿಸಲು ಸಾಧ್ಯವಾಗದೆ ಬೆಲೆ ಏರಿಕೆಗೆ ಲಗಾಮು ಬೀಳುವ ನಿರೀಕ್ಷೆಯಿದೆ.

Vodafone Idea (Vi) and BSNL
ಡಾರ್ಕ್‌ ಪ್ಯಾಟರ್ನ್‌ ವಿರುದ್ಧ ಸಮರ: ಬುಕ್ ಮೈ ಶೋ ಸೇರಿದಂತೆ 9 ಡಿಜಿಟಲ್‌ ವೇದಿಕೆಗಳ ವಿರುದ್ಧ CCPA ಕಟ್ಟುನಿಟ್ಟಿನ ಕ್ರಮ, ₹20 ಲಕ್ಷ ದಂಡ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com