ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ, ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಅಂದರೆ ಎಲೋನ್ ಮಸ್ಕ್ ಅಂತ ಹೇಳುತ್ತಿವಿ. ಅದೇ ಭಾರತದ ಶ್ರೀಮಂತ ವ್ಯಕ್ತಿ ಯಾರು ಅಂದರೆ, ಅಂಬಾನಿನೋ ಇಲ್ಲಾ ಅದಾನಿನೋ ಅಂತ ಹೇಳುತ್ತೇವೆ. ಆದರೆ, ಕರ್ನಾಟಕದ ಶ್ರೀಮಂತ ವ್ಯಕ್ತಿ ಯಾರು ಅಂದರೆ ತಡಬಡಾಯಿಸುವುದೇ ಹೆಚ್ಚು! ಅದಕ್ಕೆ ಉತ್ತರ ಇಲ್ಲಿದೆ:
Karnataka's Richest Billionaires List
ಕರ್ನಾಟಕದ ಶ್ರೀಮಂತರುOnline Desk

ಬೆಂಗಳೂರು: ವಿಶ್ವದ ನಂ.1 ಶ್ರೀಮಂತ ಯಾರೆಂದು ಕೇಳಿದರೆ ಎಲಾನ್ ಮಸ್ಕ್ ಎನ್ನುತ್ತೇವೆ, ಅದೇ ಭಾರತದ ಶ್ರೀಮಂತ ವ್ಯಕ್ತಿ ಯಾರು ಅಂದರೆ, ಅಂಬಾನಿನೋ ಇಲ್ಲಾ ಅದಾನಿನೋ ಅಂತ ಹೇಳುತ್ತೇವೆ. ಆದರೆ, ನಮ್ಮದೇ ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂದು ಯಾರಾದರೂ ಕೇಳಿದರೆ ಬಹುತೇಕರು ಕ್ಷಣಕಾಲ ಯೋಚನೆಗೆ ಬೀಳುತ್ತಾರೆ. ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿ, ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿರುವ ಆ ಕರುನಾಡ ಕುಬೇರರು ಯಾರು? ಇಲ್ಲಿದೆ ಫೋರ್ಬ್ಸ್ ಪಟ್ಟಿಯ ಪ್ರಕಾರ ಕರ್ನಾಟಕದ ಟಾಪ್-5 ಶ್ರೀಮಂತರ ಕುತೂಹಲಕಾರಿ ವಿವರ.

1. ಅಜೀಂ ಪ್ರೇಮ್‌ಜಿ (ವಿಪ್ರೋ)

Azim Premji
ಅಜೀಂ ಪ್ರೇಮ್‌ಜಿOnline Desk

ಫೋರ್ಬ್ಸ್ ಇಂಡಿಯಾ ಇಂಡೆಕ್ಸ್ ಪ್ರಕಾರ, ಐಟಿ ದಿಗ್ಗಜ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ಪ್ರಕಾರ, ಪ್ರೇಮ್‌ಜಿ ಅವರ ಒಟ್ಟು ಆಸ್ತಿ ಮೌಲ್ಯ $7.87 ಬಿಲಿಯನ್ ಅಂದರೆ ಸುಮಾರು ₹66,000 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 32ನೇ ಸ್ಥಾನ ಪಡೆದಿದ್ದಾರೆ. ಏತನ್ಮಧ್ಯೆ, ಹುರುನ್ ಇಂಡಿಯಾ ರಿಚ್ ಲಿಸ್ಟ್‌ನಲ್ಲಿ ಅವರ ಕುಟುಂಬದ ಟ್ರಸ್ಟ್ ಹಾಗೂ ಪರೋಕ್ಷ ಹೂಡಿಕೆಗಳನ್ನೂ ಒಳಗೊಂಡಂತೆ ಅವರ ಒಟ್ಟು ಆಸ್ತಿಯನ್ನು ₹2,62,800 ಕೋಟಿ ಎಂದು ಅಂದಾಜಿಸಲಾಗಿದೆ.

2. ನಿತಿನ್ ಮತ್ತು ನಿಖಿಲ್ ಕಾಮತ್ (ಜೆರೋಧಾ)

Nithin and Nikhil Kamath
ನಿತಿನ್ ಮತ್ತು ನಿಖಿಲ್ ಕಾಮತ್Online Desk

ಯಾವುದೇ ಹೊರಗಿನ ಹೂಡಿಕೆ ಪಡೆಯದೇ ಸ್ವಂತ ಬಲದಿಂದ ಕಂಪನಿಯನ್ನು ಕಟ್ಟಿ ಅತಿ ಕಿರಿಯ ವಯಸ್ಸಿನಲ್ಲೇ ಬಿಲಿಯನೇರ್ ಆದ ಯುವ ಉದ್ಯಮಿಗಳು ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಮೂಲದ ನಿತಿನ್ ಮತ್ತು ನಿಖಿಲ್ ಕಾಮತ್ ಸಹೋದರರ ಒಟ್ಟು ಮೌಲ್ಯ $7.86 ಬಿಲಿಯನ್ ಅಂದರೆ ಸುಮಾರು ₹66,900 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 33ನೇ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ, ನಂ.1ಪಟ್ಟಕಾಗಿ ಅಜೀಂ ಪ್ರೇಮ್‌ಜಿ ಅವರೊಂದಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

3. ಇರ್ಫಾನ್ ರಜಾಕ್ (ಪ್ರೆಸ್ಟೀಜ್ ಗ್ರೂಪ್)

Irfan Razack
ಇರ್ಫಾನ್ ರಜಾಕ್Online Desk

ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ನೀವು ಕಾಣುವ ಭವ್ಯವಾದ ಮಾಲ್‌ಗಳು, ಟೆಕ್ ಪಾರ್ಕ್‌ಗಳು ಮತ್ತು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದ ಪ್ರೆಸ್ಟೀಜ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಜಾಕ್ ಅವರ ಒಟ್ಟು ಆಸ್ತಿ ಮೌಲ್ಯ $4.28 ಬಿಲಿಯನ್ ಅಂದರೆ ಸುಮಾರು ₹41,227 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಮೂಲಕ, ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 68ನೇ ಸ್ಥಾನ ಪಡೆದಿದ್ದಾರೆ.

4. ಡಾ. ರಂಜನ್ ಪೈ (ಮಣಿಪಾಲ್ ಗ್ರೂಪ್)

Dr. Ranjan Pai
ಡಾ. ರಂಜನ್ ಪೈOnline Desk

ಮಣಿಪಾಲ್ ಗ್ರೂಪ್‌ನ ಮುಖ್ಯಸ್ಥರಾಗಿರುವ ಡಾ. ರಂಜನ್ ಪೈ ಅವರ ಒಟ್ಟು ಆಸ್ತಿ ಮೌಲ್ಯ $4.07ಬಿಲಿಯನ್ ಅಂದರೆ ಸುಮಾರು ₹39,204 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 72ನೇ ಸ್ಥಾನ ಪಡೆದಿದ್ದಾರೆ.

5. ಎನ್. ಆರ್. ನಾರಾಯಣ ಮೂರ್ತಿ (ಇನ್ಫೋಸಿಸ್)

N. R. Narayana Murthy
ಎನ್. ಆರ್. ನಾರಾಯಣ ಮೂರ್ತಿOnline Desk

ಜಾಗತಿಕ ಮಟ್ಟದ ಸಾಫ್ಟ್‌ವೇರ್ ದೈತ್ಯ ಸಂಸ್ಥೆಯಾದ ಇನ್ಫೋಸಿಸ್ನ ಸಹ-ಸಂಸ್ಥಾಪಕರಾದ ಎನ್. ಆರ್. ನಾರಾಯಣ ಮೂರ್ತಿ ಅವರ ಒಟ್ಟು ಆಸ್ತಿ ಮೌಲ್ಯ $3.95ಬಿಲಿಯನ್ ಅಂದರೆ ಸುಮಾರು ₹38,048 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಮೂಲಕ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 78ನೇ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com