ಜಾಗತಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕತೆಗೆ ಬೂಸ್ಟರ್ ಡೋಸ್: ಸತತ 2ನೇ ವರ್ಷವೂ ಶೇ. 7ರ ದರದಲ್ಲಿ ಜಿಡಿಪಿ ಜಿಗಿತ ಎಂದ ಐಎಂಎಫ್!

ಜಾಗತಿಕವಾಗಿ ಯುದ್ಧ ಹಾಗೂ ಆರ್ಥಿಕ ಅನಿಶ್ಚಿತತೆಗಳು ಮುಂದುವರಿದಿದ್ದರೂ, ಭಾರತದ ದೇಶೀಯ ಮಾರುಕಟ್ಟೆಯ ಗಟ್ಟಿತನದಿಂದಾಗಿ ಐಎಂಎಫ್ ಭಾರತದ ಪ್ರಗತಿಯ ಅಂದಾಜನ್ನು ಈ ಹಿಂದೆ ಜುಲೈನಲ್ಲಿ ನೀಡಿದ್ದ ಶೇ. 6.4 ರಿಂದ ನೇರವಾಗಿ ಶೇ. 7ಕ್ಕೆ (60 ಬೇಸಿಸ್ ಪಾಯಿಂಟ್ಸ್) ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
India GDP Growth: IMF Projects 7% Surge Amid Global Uncertainty Leaving China Behind
ಜಾಗತಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕತೆಗೆ ಬೂಸ್ಟರ್ ಡೋಸ್AI Image
Updated on: 

India GDP Growth: ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಅಕ್ಟೋಬರ್ 2026ರ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯಲ್ಲಿ ಭಾರತದ ಆರ್ಥಿಕತೆಯು 2027ರಲ್ಲಿ ಶೇಕಡಾ 7ರಷ್ಟು ವೇಗದ ಆರ್ಥಿಕ ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ. ಇದೇ ಅವಧಿಯಲ್ಲಿ ಮುಂದುವರಿದ ಆರ್ಥಿಕತೆಗಳು ಶೇಕಡಾ 1.8ರಷ್ಟು ಮಂದಗತಿಯ ಬೆಳವಣಿಗೆಯನ್ನು ದಾಖಲಿಸಲಿವೆ ಎಂದು ಐಎಂಎಫ್ ತಿಳಿಸಿದ್ದು, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಇಂಧನ ಬೆಲೆಗಳ ಏರಿಕೆಯ ನಡುವೆಯೂ ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಐಎಂಎಫ್ ವಿಶ್ಲೇಷಿಸಿದೆ. ಆ ಕುರಿತ ವರದಿ ಇಲ್ಲಿದೆ:

ಜಾಗತಿಕವಾಗಿ ಯುದ್ಧ ಹಾಗೂ ಆರ್ಥಿಕ ಅನಿಶ್ಚಿತತೆಗಳು ಮುಂದುವರಿದಿದ್ದರೂ, ಭಾರತದ ದೇಶೀಯ ಮಾರುಕಟ್ಟೆಯ ಗಟ್ಟಿತನದಿಂದಾಗಿ ಐಎಂಎಫ್ ಭಾರತದ ಪ್ರಗತಿಯ ಅಂದಾಜನ್ನು ಈ ಹಿಂದೆ ಜುಲೈನಲ್ಲಿ ನೀಡಿದ್ದ ಶೇ. 6.4 ರಿಂದ ನೇರವಾಗಿ ಶೇ. 7ಕ್ಕೆ (60 ಬೇಸಿಸ್ ಪಾಯಿಂಟ್ಸ್) ಏರಿಕೆ ಮಾಡಿದೆ. ಅದರಲ್ಲೂ, ಚೀನಾ, ರಷ್ಯಾ ಮತ್ತು ಬ್ರೆಜಿಲ್‌ನಂತಹ ಪ್ರಮುಖ ರಾಷ್ಟ್ರಗಳ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿರುವಾಗ, ಭಾರತವು ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ.

ಸತತ ಎರಡೂ ವರ್ಷ ಶೇ. 7ರ ಪ್ರಗತಿ

ಕೇವಲ 2026-27ರ ಆರ್ಥಿಕ ವರ್ಷ ಮಾತ್ರವಲ್ಲದೆ, ಅದರ ಮುಂದಿನ ವರ್ಷವಾದ 2027-28ರಲ್ಲೂ ಭಾರತವು ಶೇ. 7ರ ದರದಲ್ಲೇ ಪ್ರಗತಿ ಕಾಯ್ದುಕೊಳ್ಳಲಿದೆ ಎಂದು ಐಎಂಎಫ್ ವರದಿ ಹೇಳಿದೆ. ಅದರಲ್ಲೂ, ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಿಶ್ವ ಬ್ಯಾಂಕ್ ಕೂಡ ಭಾರತದ ಆರ್ಥಿಕ ಮುನ್ಸೂಚನೆಯನ್ನು ಶೇ. 7ಕ್ಕೂ ಅಧಿಕಕ್ಕೆ ಹೆಚ್ಚಿಸಿರುವುದವು. ಮತ್ತೊಂದೆಡೆ, ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾದ ಬೆಳವಣಿಗೆಯ ದರವು 2026ರಲ್ಲಿ ಶೇ. 4.5ಕ್ಕೆ ಹಾಗೂ 2027ರಲ್ಲಿ ಶೇ. 4ಕ್ಕೆ ಮತ್ತಷ್ಟು ಕುಸಿಯಲಿದೆ ಎಂದು ವರದಿ ಹೇಳಿದೆ.

India GDP Growth: IMF Projects 7% Surge Amid Global Uncertainty Leaving China Behind
ಸಾಲಗಾರರಿಗೆ ಶಾಕ್ ಕೊಟ್ಟ ಆರ್‌ಬಿಐ! 4 ವರ್ಷಗಳ ಬಳಿಕ ರೆಪೊ ದರ ಶೇ. 5.5ಕ್ಕೆ ಹೆಚ್ಚಳ: ಹಾಗಾದ್ರೆ, ನಿಮ್ಮ ಮನೆ, ವಾಹನ ಸಾಲದ EMI ಎಷ್ಟು ಹೆಚ್ಚಾಗಲಿದೆ?

ಹಾಗಾದ್ರೆ, ಆರ್ಥಿಕ ಬೆಳವಣಿಗೆಗೆ ಪ್ರಮುಖ ಕಾರಣಗಳೇನು?

ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿರುವ ದೇಶೀಯ ಬೇಡಿಕೆ, ಸದೃಢವಾಗಿರುವ ಸೇವಾ ವಲಯ, ಆರ್ಥಿಕ ಸುಧಾರಣೆಗಳು ಹಾಗೂ ಅನುಕೂಲಕರ ಜನಸಂಖ್ಯಾ ಲಾಭಾಂಶ ದೇಶದ ಪ್ರಗತಿಗೆ ಮುಖ್ಯ ಕಾರಣಗಳಾಗಿವೆ ಎಂದು ಐಎಂಎಫ್ ವಿಶ್ವ ಆರ್ಥಿಕ ದೃಷ್ಟಿಕೋನ ವರದಿ ಶ್ಲಾಘಿಸಿದೆ. ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ಕಚ್ಚಾ ತೈಲ ಬೆಲೆಗಳು ಗಗನಕ್ಕೇರುತ್ತಿರುವುದು ಭಾರತದಂತಹ ತೈಲ ಆಮದು ಅವಲಂಬಿತ ದೇಶಕ್ಕೆ ಹಣದುಬ್ಬರದ ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ಐಎಂಎಫ್ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com