ಮಹಿಳೆಯರಿಗೆ ಗುಡ್ ನ್ಯೂಸ್; 4% ಬಡ್ಡಿಗೆ 3 ಲಕ್ಷ ಸಾಲ! ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎಂಬುದು ಸರ್ಕಾರ ಜಾರಿಗೆ ತಂದಿರುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಗ್ರಾಮೀಣ ಭಾಗದ ಬಡತನವನ್ನು ನಿರ್ಮೂಲನೆ ಮಾಡುವುದು ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಮುಖ್ಯ ಉದ್ದೇಶದೊಂದಿಗೆ 4% ಬಡ್ಡಿಗೆ 3 ಲಕ್ಷ ಸಾಲ ಸಿಗಲಿದೆ. ಆ ಕುರಿತ ವರದಿ ಇಲ್ಲಿದೆ:
DAY NRLM Scheme
ಮಹಿಳೆಯರಿಗೆ ಗುಡ್ ನ್ಯೂಸ್AI Image
Updated on

ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಬದಲಾಯಿಸಿ ಅವರ ಬದುಕಿಗೆ ಹೊಸ ಭರವಸೆ ನೀಡಲು ಸರ್ಕಾರಗಳು ಹಲವು ಯೋಜನೆಗಳನ್ನು ತರುತ್ತವೆ. ಅದರಂತೆ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ತುಂಬಿದ ಒಂದು ಮಹತ್ವದ ಕಾರ್ಯಕ್ರಮದ ಬಗ್ಗೆ ನಿಮಗೆ ಗೊತ್ತಾ? ಭಾರತದ ಕೋಟ್ಯಂತರ ಬಡ ಜನರ ಬಾಳಿನಲ್ಲಿ ದೊಡ್ಡ ಬದಲಾವಣೆ ತಂದ ಆ ಯೋಜನೆ ಯಾವುದು, ಅದು ಹೇಗೆ ಕೆಲಸ ಮಾಡುತ್ತದೆ. ಅದುವೇ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹3 ಲಕ್ಷದವರೆಗಿನ ಸಾಲ ಸಿಗುತ್ತದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್?

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (National Rural Livelihoods Mission - NRLM) ಎಂಬುದು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಜಾರಿಗೆ ತಂದಿರುವ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಗ್ರಾಮೀಣ ಭಾಗದ ಬಡತನವನ್ನು ನಿರ್ಮೂಲನೆ ಮಾಡುವುದು ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲಾಗುತ್ತದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮುಖ್ಯ ಉದ್ದೇಶವೇನು?

  • ಬಡತನ ನಿರ್ಮೂಲನೆ: ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಸುಸ್ಥಿರ ಮತ್ತು ಗೌರವಾನ್ವಿತ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸುವುದು.

  • ಮಹಿಳಾ ಸಬಲೀಕರಣ: ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಸಂಘಗಳ ಅಡಿಯಲ್ಲಿ ಸಂಘಟಿಸಿ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು.

  • ಕೌಶಲ್ಯಾಭಿವೃದ್ಧಿ: ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

ಅರ್ಹತೆ ಏನು?

ಕನಿಷ್ಠ ಕಳೆದ 6 ತಿಂಗಳುಗಳಿಂದ ಆ ಸ್ವ-ಸಹಾಯ ಗುಂಪುಗಳು ಸಕ್ರಿಯವಾಗಿ ಅಸ್ತಿತ್ವದಲ್ಲಿರಬೇಕು.
'ಪಂಚಸೂತ್ರಗಳನ್ನು' ಪಾಲಿಸಬೇಕು: ನಿಯಮಿತ ಸಭೆಗಳು, ನಿಯಮಿತ ಉಳಿತಾಯ, ನಿಯಮಿತ ಅಂತರ್-ಸಾಲ, ಸರಿಯಾದ ಸಮಯಕ್ಕೆ ಮರುಪಾವತಿ, ಲೆಕ್ಕದ ಪುಸ್ತಕಗಳನ್ನು ನವೀಕರಿಸುವುದು.
ನಬಾರ್ಡ್‌ ನಿಗದಿಪಡಿಸಿದ ಶ್ರೇಣೀಕರಣದ ಮಾನದಂಡಗಳ ಪ್ರಕಾರ ಅರ್ಹತೆ ಪಡೆದಿರಬೇಕು.

ಬಡ್ಡಿ ದರ ಎಷ್ಟು?

ದೇಶದ ಎಲ್ಲಾ ಜಿಲ್ಲೆಗಳ ಅರ್ಹ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕುಗಳು ₹3 ಲಕ್ಷದವರೆಗಿನ ಸಾಲವನ್ನು ವಾರ್ಷಿಕ ಶೇ. 7 ರ ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತವೆ. ಹಾಗಾಗಿ, ಬ್ಯಾಂಕಿನ ಸಾಮಾನ್ಯ ಬಡ್ಡಿ ದರ ಮತ್ತು ಈ ಶೇ. 7 ರ ನಡುವಿನ ವ್ಯತ್ಯಾಸದ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ (ಬಡ್ಡಿ ಸಹಾಯಧನ). ಅದರಲ್ಲೂ, ಸಾಲ ಪಡೆದ ಸ್ವ-ಸಹಾಯ ಗುಂಪುಗಳು ನಿಗದಿತ ಸಮಯಕ್ಕೆ ಸರಿಯಾಗಿ ಕಂತುಗಳನ್ನು ಮರುಪಾವತಿ ಮಾಡಿದರೆ, ಸರ್ಕಾರ ಅವರಿಗೆ ಹೆಚ್ಚುವರಿಯಾಗಿ ಶೇ. 3 ರಷ್ಟು ಬಡ್ಡಿ ಸಹಾಯಧನವನ್ನು ನೀಡುತ್ತದೆ. ಇದರ ಫಲವಾಗಿ, ಪ್ರಾಮಾಣಿಕವಾಗಿ ಸಾಲ ತೀರಿಸುವ ಗುಂಪುಗಳಿಗೆ ಪರಿಣಾಮಕಾರಿ ಬಡ್ಡಿ ದರವು ಕೇವಲ ಶೇ. 4 ಕ್ಕೆ ಇಳಿಯುತ್ತದೆ.

ಮುಂದುವರೆದು, ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ (ಉದಾಹರಣೆಗೆ: ಉಪ್ಪಿನಕಾಯಿ, ಮಸಾಲೆ ಪದಾರ್ಥಗಳು, ಹ್ಯಾಂಡಿಕ್ರಾಫ್ಟ್ಸ್ ಇತ್ಯಾದಿ) ಮಾರುಕಟ್ಟೆ ಒದಗಿಸಲು ಸಾರಸ್ ಮೇಳ ಮತ್ತು ಆನ್‌ಲೈನ್ ವೇದಿಕೆಗಳನ್ನು ಕಲ್ಪಿಸಲಾಗುತ್ತದೆ.

DAY NRLM Scheme
ಮಹಿಳೆಯರ ಸ್ವಾವಲಂಬನೆಗೆ ಹೊಸ ಬಲ: ಮಹಿಳಾ ಸಮೃದ್ಧಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ; ಅರ್ಜಿ ಸಲ್ಲಿಸೋದು ಹೇಗೆ?

ಅರ್ಜಿ ಸಲ್ಲಿಕೆ ವಿಧಾನ:

  • ನಿಮ್ಮ ಸಮೀಪದ ಬ್ಲಾಕ್ ಅಭಿವೃದ್ಧಿ ಕಚೇರಿ (BDO) ಅಥವಾ ಸ್ಥಳೀಯ ಗ್ರಾಮೀಣ ಜೀವನೋಪಾಯ ಮಿಷನ್ ಕಚೇರಿಯನ್ನು ಸಂಪರ್ಕಿಸಿ.

  • ಹಳ್ಳಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳು, ಗ್ರಾಮ ಒಕ್ಕೂಟಗಳು ಅಥವಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು.

ಇದರೊಂದಿಗೆ, ಅಧಿಕೃತ ಪೋರ್ಟಲ್ ಆದ https://www.dord.gov.in/ ಗೆ ಭೇಟಿ ನೀಡಿ ಸದಸ್ಯರ ವಿವರಗಳನ್ನು ನೋಂದಾಯಿಸಬಹುದು. ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಬಳಕೆದಾರರ ಖಾತೆ (User Account) ತೆರೆದು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್

  • ಮತದಾರರ ಗುರುತಿನ ಚೀಟಿ ಅಥವಾ ಇತರ ಮಾನ್ಯತೆ ಪಡೆದ ಗುರುತಿನ ಪುರಾವೆ

  • ನಿವಾಸದ ದೃಢೀಕರಣ ಪತ್ರ

  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

  • ಬ್ಯಾಂಕ್ ಖಾತೆ ವಿವರ ಮತ್ತು ಪಾಸ್‌ಬುಕ್ ಪ್ರತಿ 

DAY NRLM Scheme
ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com