ಸಿನಿಮಾ ನಟಿಯರ ಗೋಳು ಯಾರಿಗೂ ಬೇಡ ಕಣ್ರಿ. ಸೀರೆ ಉಟ್ರೂ ತಪ್ಪು, ಎಕ್ಸ್‌ಪೋಸ್ ಮಾಡಿದ್ರೂ ತಪ್ಪು. ಕನ್ನಡದ ಹುಡುಗಿ ಪ್ರಿಯಾಮಣಿ ತೆಲುಗು ಸಿನಿಮಾದಲ್ಲಿ ಸೀರೆ ಉಟ್ಟಿದ್ದಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರುವಂತಾಗಿದೆ. ಆಕೆ 'ಚಾಂಡಿ'ಯಲ್ಲಿ ಅಸಭ್ಯ ರೀತಿಯಲ್ಲಿ ಸೀರೆ ಉಟ್ಟಿದ್ದಾರೆ ಎಂದು ಸುಬುದ್ಧಿ ಎನ್ನುವ ಹೈದರಾಬಾದ್‌ನ ವಕೀಲ ಕೇಸು ಜಡಿದಿದ್ದಾರೆ. 'ಏನೋ ಹಾಡುಗಳಲ್ಲಿ ಸ್ವಲ್ಪ ಮಸಾಲೆ ಸೇರಿಸಬೇಕಾಗುತ್ತಪ್ಪ. ಆದರೆ ನಾನು ಅಸಭ್ಯವಾಗಿ ಕಾಣಿಸಿಕೊಂಡಿದ್ದೇನೆ ಎನ್ನುವುದನ್ನು ಸಾಬೀತುಪಡಿಸಲಿ' ಎಂದು ಬೆಂಗಳೂರು ಬ್ಯೂಟಿ ಸವಾಲೆಸೆದಿದ್ದಾಳೆ. ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ಮತ್ತೊಬ್ಬ ಹುಡುಗಿ ಅನುಷ್ಕಾ ಶೆಟ್ಟಿ ವಿರುದ್ಧವೂ ಇದೇ ಸುಬುದ್ಧಿ ಇಂಥಹುದೇ ಕಾರಣ ನೀಡಿ ಕಂಪ್ಲೇಂಟ್ ಕೊಟ್ಟಿದ್ದಾರೆ.