

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ 'ಗುಂಡೆ ಜಾರಿ ಗಲ್ಲಂತಯಿಂದಿ' ಎನ್ನುವ ತೆಲುಗು ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿರುವುದು ಹಳೆ ಸುದ್ದಿ. ತಾಜಾ ಸಮಾಚಾರ ಏನೆಂದರೆ ಆಕೆಯ ತಂಗಿ ಇನ್ಸಿ ಗುಟ್ಟಾ ಕೂಡ ಎಂಟ್ರಿ ಕೊಟ್ಟಿದ್ದಾಳೆ. ಅಕ್ಕನಿಗಿಂತ ತಡವಾಗಿ ಚಿತ್ರರಂಗಕ್ಕೆ ಬಂದರೂ ತಂಗಿಯ ಚಿತ್ರವೇ ಮೊದಲು ಬಿಡುಗಡೆಯಾಗಲಿದೆ. ಇನ್ಸಿ ಕಾಣಿಸಿಕೊಂಡಿರುವ 'ಬ್ಯಾಕ್ ಬೆಂಚ್ ಸ್ಟುಡೆಂಟ್ಸ್' ತೆರೆ ಕಾಣಲು ಸಿದ್ಧವಾಗಿದೆ. ಮಹತ್ ರಾಘವೇಂದ್ರ ಎನ್ನುವ ಮತ್ತೊಂದು ಹೊಸಮುಖವೂ ಇದೇ ಚಿತ್ರದ ಮೂಲಕ ಪರಿಚಯವಾಗಲಿದೆ. ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇನ್ಸಿ ಸಹಾಯಕ ನಿರ್ದೇಶಕಿಯಾಗುವ ಹಂಬಲದಿಂದ ಚಿತ್ರರಂಗಕ್ಕೆ ಬಂದಳಂತೆ. ನಿರ್ದೇಶಕರು, 'ನಿನ್ನದು ಫೋಟೊಜೆನಿಕ್ ಫೇಸ್. ಕ್ಯಾಮೆರಾ ಹಿಂದಿರುವುದಕ್ಕಿಂತ ಮುಂದಿರಬೇಕು' ಎಂದು ಪುಸಲಾಯಿಸಿ ಮೇಕಪ್ ಮಾಡಿಸಿದರಂತೆ.