ನಡು ಬೀದಿಯಲ್ಲಿ ಧರಣಿ ಕುಳಿತ ಸೋನಾಕ್ಷಿ ಸಿನ್ಹಾ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದಕ್ಷಿಣ ಮುಂಬೈನ ನಡು ರಸ್ತೆಯಲ್ಲೇ ಭಾನುವಾರ ಬೆಳಿಗ್ಗೆ ಧರಣಿ ನಡೆಸಿದ್ದಾರೆ...
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (ಸಾಂದರ್ಭಿಕ ಚಿತ್ರ)
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (ಸಾಂದರ್ಭಿಕ ಚಿತ್ರ)
Updated on: 

ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದಕ್ಷಿಣ ಮುಂಬೈನ ನಡು ರಸ್ತೆಯಲ್ಲೇ ಭಾನುವಾರ ಬೆಳಿಗ್ಗೆ ಧರಣಿ ನಡೆಸಿದ್ದಾರೆ.

ಮುಂಬೈನ ನಡು ರಸ್ತೆಯಲ್ಲಿ ಧರಣಿ ನಡೆಸಿದ್ದು, ಪೊಲೀಸರು ಟಿಯರ್ ಗ್ಯಾಸ್ ಸಿಡಿಸಿದರೂ ಸೋನಾಕ್ಷಿ ಮಾತ್ರ ಕೂತ ಜಾಗದಿಂದ ಅಲುಗಾಡದೆ ಸುದ್ದಿಯಾಗಿದ್ದಾರೆ.

ಆದರೆ ಸೋನಾಕ್ಷಿ ಸಿನ್ಹಾ ನಿಜವಾಗಿ ಧರಣಿಗೆ ಕುಳಿತಿಲ್ಲ. ಸೋನಾಕ್ಷಿ ಅಭಿನಯಿಸುತ್ತಿರುವ "ಅಕಿರಾ' ಹಿಂದಿ ಚಿತ್ರರಂಗದ ಚಿತ್ರೀಕರಣಕ್ಕಾಗಿ ಸೋನಾಕ್ಷಿ ಧರಣಿ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

ಈ ಚಿತ್ರದಲ್ಲಿ ಶತ್ರುಘ್ನ ಸಿನ್ಹಾ, ಸೋನಾಕ್ಷಿ ಸಿನ್ಹಾ ತಂದೆಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆಂದು ಹೇಳಲಾಗಿದ್ದು, ಇದೇ ಮೊದಲ ಬಾರಿಗೆ ತಂದೆ- ಮಗಳು ಚಿತ್ರವೊಂದರಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com