ಮಿರ್ಜಾ ಗಾಯಬ್ ಆಗ್ತಿಲ್ಲ!

ಸಾಹಿಲ್ ಸಂಘ ಸೇರಿರುವ ದಿಯಾ ಮಿರ್ಜಾ ಇದೀಗ ಇನ್ನೊಂದು ಸಂಘಕ್ಕೆ ಸೇರಿದ್ದಾಳೆ. ಅದು ನಿರ್ದೇಶಕರ...
ದಿಯಾ ಮಿರ್ಜಾ
ದಿಯಾ ಮಿರ್ಜಾ

ಸಾಹಿಲ್  ಸಂಘ ಸೇರಿರುವ ದಿಯಾ ಮಿರ್ಜಾ ಇದೀಗ ಇನ್ನೊಂದು ಸಂಘಕ್ಕೆ ಸೇರಿದ್ದಾಳೆ. ಅದು ನಿರ್ದೇಶಕರ ಸಂಘ. ಹೌದು ಸಾಹಿಲ್ ಸಂಘನನ್ನು ಮದುವೆಯಾದ ನಂತರ ಚಿತ್ರರಂಗದಿಂದ `ಮಿರ್ಜಾ ಗಾಯಬ್' ಆಗ್ತಾಳೆ ಎಂಬ ಗಾಸಿಪ್ ಒಂದೆಡೆ ಹಬ್ಬುತ್ತಿರುವಂತೆಯೇ ತಾನು ನಿರ್ದೇಶಕಿಯಾಗಿ ಮರುಪ್ರವೇಶ ಮಾಡುತ್ತಿರು ವುದಾಗಿ ಘೋಷಿಸಿದ್ದಾಳೆ.

ನಟಿಯಾಗಿ ಭರ್ಜರಿ ಯಶಸ್ಸು ಕಾಣದೇ ಹೋದರೂ ದಿಯಾ ಮಿರ್ಜಾ ಅಂದರೆ ಬಾಲಿವುಡ್ ಈಗಲೂ ಟಾಪ್ ನಟಿಯರ ಪಟ್ಟಿಯಲ್ಲೇ ನೋಡುತ್ತದೆ. ಆಕೆ ಎಂಟ್ರಿಯಾದ ದಿನಗಳಲ್ಲಿ ಅವಳನ್ನು ಐಶ್ವರ್ಯರೈ ಅಂತ ಕನ್ ಫ್ಯೂಸ್ ಮಾಡಿಕೊಂಡವರೂ ಇದ್ದಾರೆ.

ಆದರೆ ಬರಬರುತ್ತಾ, ಬರಬರುತ್ತಾ ಸೆಕೆಂಡ್ ಲೀಗ್ ಹೀರೋಗಳೊಂದಿಗೆ ಕಾಣಿಸಿಕೊಂಡು ನಿಧಾನವಾಗಿ ಗೆಸ್ಟ್ ಅಪಿಯರೆನ್ಸ್ ಮತ್ತು ಸ್ಪೆಷಲ್ ಸಾಂಗ್ ಗಳಿಗೆ ಮಾತ್ರ ಸೀಮಿತವಾದ ದಿಯಾ ನಂತರ ನಿರ್ಮಾಣದತ್ತ ಮನಸ್ಸು ಮಾಡಿದ್ದಳು. ಈಗ ನಿರ್ಮಾಪಕಿಯಾಗುವ ಮೊದಲು ನಿರ್ದೇಶಕಿಯಾಗ ಹೊರಟಿದ್ದಾಳೆ ದಿಯಾ. ಕಾರಣ ಅಂಥದೊಂದು ಸ್ಕ್ರಿಪ್ಟ್ ಆಕೆಗೆ ಸಿಕ್ಕಿದೆ. ಬಾಲಿವುಡ್‍ನ ಎರಡು ಹಾಟ್ ಹುಡುಗರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಚಿತ್ರ ಇದೇ ಜೂನ್ ಗೆ ಸೆಟ್ಟೇರುವುದು ಸ್ವತಃ ದಿಯಾ ಖಾತರಿಪಡಿಸಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com