ಮತ್ತೊಂದು ದಾಖಲೆ ಬರೆದ ಪಿಕೆ

ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಖ್ಯಾತಿ ಪಡೆದಿದೆ.
ಅಮೀರ್ ಖಾನ್ ನಟನೆಯ ಪಿಕೆ ಚಿತ್ರ (ಸಂಗ್ರಹ ಚಿತ್ರ)
ಅಮೀರ್ ಖಾನ್ ನಟನೆಯ ಪಿಕೆ ಚಿತ್ರ (ಸಂಗ್ರಹ ಚಿತ್ರ)

ಮುಂಬೈ: ನಟ ಅಮೀರ್ ಖಾನ್ ಅವರ ಪಿಕೆ ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಖ್ಯಾತಿ ಪಡೆದಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಹಿಂದಿನ ಚಿತ್ರ 3 ಈಡಿಯಟ್ಸ್ ಕೂಡ ದಾಖಲೆ ಗಳಿಕೆ ಕಂಡಿತ್ತು. ಆದರೆ ಪ್ರಸ್ತುತ ಪಿಕೆ ಚಿತ್ರ ಬಾಲಿವುಡ್‌ನ ಇತಿಹಾಸದ ಎಲ್ಲ ದಾಖಲೆಗಳನ್ನು ಮುರಿದಿದ್ದು, 300 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಖ್ಯಾತಿಗಳಿಸಿದೆ. ಕಳೆದ ವಾರಾಂತ್ಯಕ್ಕೆ ಪಿಕೆ ಚಿತ್ರದಗಳಿಕೆ 300 ಕೋಟಿ ದಾಟಿದ್ದು, ಜನವರಿ 2ರಂದು 6.85 ಕೋಟಿ, ಶನಿವಾರ 8.32 ಕೋಟಿ ಮತ್ತು ನಿನ್ನೆ ಭಾನುವಾರ ಸುಮಾರು 6.16 ಕೋಟಿ ಗಳಿಕೆ ಮಾಡುವುದರೊಂದಿಗೆ ಪಿಕೆ ಚಿತ್ರದ ಗಳಿಕೆ 300 ಕೋಟಿ ಗಡಿಯನ್ನು ದಾಟಿದೆ.

ಕೋಟಿ ಕ್ಲಬ್ ನಿರ್ಮಾಣದಲ್ಲಿ ಅಮೀರ್ ಖಾನೇ ಮುಂದು
ಬಾಲಿವುಡ್‌ನಲ್ಲಿ ಇತ್ತೀಚೆಗೆ ಆರಂಭವಾಗಿರುವ ಕೋಟಿ ಕ್ಲಬ್ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದೇ ಅಮೀರ್ ಖಾನ್ ಅವರ ಘಜಿನಿ ಚಿತ್ರ. ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಘಜಿನಿ ಚಿತ್ರ ಮೊದಲ ಬಾರಿಗೆ 100 ಕೋಟಿ ಆದಾಯ ಗಳಿಸುವ ಮೂಲಕ 100 ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರವಾಗಿತ್ತು. ಇನ್ನು ಇದೇ ರಾಜ್‌ಕುಮಾರ್ ಹಿರಾನಿ ಮತ್ತು ಅಮೀರ್ ಖಾನ್ ಜೋಡಿಯ ಈ ಹಿಂದಿನ ಚಿತ್ರ 3 ಈಡಿಯಟ್ಸ್ ಕೂಡ 200 ಕೋಟಿ ಆದಾಯ ಗಳಿಕೆ ಮಾಡಿ ಮೊದಲ ಚಿತ್ರ ಎಂಬ ಖ್ಯಾತಿ ಗಳಿಸಿತ್ತು. ಇದೀಗ ಮತ್ತೆ ಇದೇ ಜೋಡಿಯ ಪಿಕೆ ಚಿತ್ರ 300 ಕೋಟಿ ಆದಾಯ ಗಳಿಸುವ ಮೂಲಕ 300 ಕೋಟಿ ಕ್ಲಬ್ ಅನ್ನು ನಿರ್ಮಿಸಿದೆ.

ಇನ್ನು 300 ಕೋಟಿ ಕ್ಲಬ್ ರಚಿಸಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರಗಳಾದ ಅಮೀರ್ ನಟನೆಯ ಧೂಮ್ 3 (ಸುಮಾರು 265 ಕೋಟಿ), ಶಾರುಖ್ ಅಭಿನಯದ ಚೆನ್ನೈ ಎಕ್ಸಪ್ರೆಸ್ (258 ಕೋಟಿ), ಸಲ್ಮಾನ್ ನಟನೆಯ ಕಿಕ್ ಚಿತ್ರ (200)ಗಳು ಆ ಸಾಧನೆ ಮಾಡುವುದರಲ್ಲಿ ಹಿಂದೆ ಬಿದ್ದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com