ಕೂದಲ್ ಕಾದಲ್

ಶತ್ರು ಪುತ್ರಿ ಸೋನಾಕ್ಷಿ ಸಿನ್ಹಾ ಯಶಸ್ಸಿಗಾಗಿ ಶಾರ್ಟ್‌ಕಟ್ ಮೊರೆ ಹೋಗಿದ್ದಾಳೆ...
ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ

ಶತ್ರು ಪುತ್ರಿ ಸೋನಾಕ್ಷಿ ಸಿನ್ಹಾ ಯಶಸ್ಸಿಗಾಗಿ ಶಾರ್ಟ್‌ಕಟ್ ಮೊರೆ ಹೋಗಿದ್ದಾಳೆ ಎಂಬ ಗಾಳಿ ಸುದ್ದಿ ಎರಡು ದಿನಗಳಿಂದ ಕೇಳಿ ಬರುತ್ತಿತ್ತು. ಅದು ಈಗ ನಿಜ ಎಂದು ಸಾಬೀತಾಗಿದೆ.

ಸೋನಾಕ್ಷಿ ಈಗ ಶಾರ್ಟ್ ಕಟ್ ಮೂಲಕ ಗೆಲ್ಲಲು ಹೊರಟಿದ್ದಾಳೆ. ಹೆದ್ದಾರಿಯಲ್ಲೇ ಗೆಲುವು ಸಿಕ್ಕಾಗ ಇದೆಲ್ಲ ಬೇಕಿತ್ತೇ ಅಂತೆಲ್ಲ ಪ್ರಶ್ನೆ ಕೇಳೋ ಹಾಗಿಲ್ಲ. ನೀವಂದ್ಕೊಂಡಿರೋ ಶಾರ್ಟ್ ಕಟ್ ಅಲ್ಲ ಇದು.

ಇಷ್ಟು ದಿನ ನೀಳಕೇಶದಲ್ಲಿ ಸಾಂಪ್ರದಾಯಿಕವಾಗಿ ಕಾಣುತ್ತಿದ್ದ ದಬಾಂಗ್ ಗರ್ಲ್ ಲಿಂಗಾ ಚಿತ್ರದ ನಂತರ ಲುಕ್ಕಿನಲ್ಲಿ ಕೊಂಚ ಬದಲಾವಣೆ ಅಗತ್ಯ ಎನಿಸಿ ಬಾಲಿವುಡ್ಡಲ್ಲಿ ಹೊಸ ರೀತಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾಳೆ.

ದೇಹದ ತೂಕ ಕಡಿಮೆ ಮಾಡಿಕೊಳ್ಳುವ  ಪ್ರಯತ್ನದಲ್ಲಿ ಕೂದಲಿನದೂ ಅಳಿಲು ಸೇವೆ ಇರಲಿ ಎಂದೋ ಏನೋ, ಈಕೆ ಕೂದಲಿಗೆ ಕತ್ತರಿ ಹಾಕಿಸಿದ್ದಾಳೆ. ಆ ಮೂಲಕ ಬಾಬ್‌ಕಟ್ ಬೇಬ್ ಆಗಿದ್ದಾಳೆ. ಆಕೆಯ ನಾಲ್ಕು ವರ್ಷದ ವೃತ್ತಿ ಜೀವನದಲ್ಲಿ ಆಕೆ ಹೇರ್‌ಕಟ್ ಮಾಡಿಸಿದ್ದು ಇದೇ ಮೊದಲಂತೆ. ಈ ಸುದ್ದಿ ತಿಳಿದು ಕಿಕ್ ಹುಡುಗಿ ಜಾಕ್ವೆಲಿನ್ ಕೂಡ ಹೇರ್ ಟ್ರಿಮ್ ಮಾಡಿಸಿದ್ದಾಳಂತೆ. ಇದನ್ನು ಕಂಡ ಸಿನಿಪ್ರೇಮಿಗಳಿಗೆ ಬಾಲಿವುಡ್ಡಲ್ಲಿ ಕಮ್ಮಿ ಬಟ್ಟೆ ಹಾಕಲು ಪೈಪೋಟಿ ನಡೆಯುವ ರೀತಿ ಕಮ್ಮಿ ಕೂದಲಿಗೂ ಪೈ ಪೋಟಿ ಶುರುವಾಗಿದೆಯಾ ಎಂಬ ಅನುಮಾನ ಶುರುವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com