ಮಾನಸಿಕ ಖಿನ್ನತೆಯಿಂದ ಹೊರಬಂದು ಗಟ್ಟಿ ವ್ಯಕ್ತಿಯಾದೆ: ದೀಪಿಕಾ ಪಡುಕೋಣೆ

ಮಾನಸಿಕ ತೊಂದರೆಗಳ ಬಗ್ಗೆ ಹೇಳಿಕೊಳ್ಳುವುದು ಸುಲಭವೇನಲ್ಲ.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on

ಮುಂಬೈ: ಮಾನಸಿಕ ತೊಂದರೆಗಳ ಬಗ್ಗೆ ಹೇಳಿಕೊಳ್ಳುವುದು ಸುಲಭವೇನಲ್ಲ. ಅದೂ ತಾರೆಗಳಿಗೆ ಇದು ದುಸ್ಸಾಹಸದ ಕೆಲಸವೇ. ಬಾಲಿವುಡ್ ತಾರಾಲೋಕದ ಉತ್ತುಂಗಕ್ಕೇರಿದ್ದ ನಟಿ ದೀಪಿಕಾ ಪಡುಕೋಣೆ, ತಾವು ಅನುಭವಿಸಿದ ಮಾನಸಿಕ ಖಿನ್ನತೆಯ ನೋವನ್ನು ತೋಡಿಕೊಂಡಿದ್ದಾರೆ.

೨೦೧೪ ಪ್ರಾರಂಭದಲ್ಲಿ ತಾನು ಉತ್ತುಂಗದಲ್ಲಿದ್ದಾಗ, ಹಾಗೂ ತನಗೆ ಹೊಗಳಿಕೆಯ ಸುರಿಮಳೆಗಳೆ ಬರುತ್ತಿದ್ದಾಗ ಒಂದು ದಿನ ಬೆಳಗ್ಗೆ ಏಳಲು ಸಾಧ್ಯವಾಗಲಿಲ್ಲ. ಎಲ್ಲ ಖಾಲಿ ಅನ್ನಿಸುತ್ತಿತ್ತು. 'ಹ್ಯಾಪಿ ನ್ಯೂ ಯಿಯರ್' ಸಿನೆಮಾದ ಚಿತ್ರೀಕರಣಕ್ಕೆ ಎದ್ದು ಹೋಗಲು ಮನಸ್ಸೇ ಇರುತ್ತಿರಲಿಲ್ಲ. ಇದನ್ನು ನನ್ನ ಪೋಷಕರಿಗೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ದಿನ ತನ್ನ ತಾಯಿಯ (ಉಜ್ಜಲಾ ಪಡುಕೋಣೆ) ಮುಂದೆ ಗೊಳೋ ಎಂದು ಕಣ್ಣೀರಿಟ್ಟೆ. ಅವರಿಗೆ ನನ್ನ ತೊಂದರೆಯ ಅರಿವಾಗಿ ಮಾನಸಿಕ ತಜ್ಞರಿಗೆ ತೋರಿಸಲು ಸೂಚನೆ ಕೊಟ್ಟರು. ಹಾಗಾಗಿ ನನ್ನ ಗೆಳೆಯ ಮಾನಸಿಕ ತಜ್ಞ ಅಣ್ಣಾ ಚಾಂಡಿಯ ಸಂಪರ್ಕಕ್ಕೆ ಬಂದು ನನ್ನ ತೊಂದರೆಯ ಮೂಲ ತಿಳಿದುಕೊಂಡೆ.

ನಂತರ ಬೆಂಗಳೂರಿನ ಮಾನಸಿಕ ತಜ್ಞ ಡಾ. ಶ್ಯಾಮ್ ಭಟ್ ಅವರನ್ನು ಸಂಪರ್ಕಿಸಿ, ಅಲ್ಲಿ ತೆಗೆದುಕೊಂದ ಚಿಕಿತ್ಸೆಯಿಂದ ಗುಣಮುಖನಾದೆ. ಉದ್ವೇಗ, ಖಿನ್ನತೆಗಳಿಂಡ ಹೊರಬಂದೆ ಹಾಗೂ ಗಟ್ಟಿ ವ್ಯಕ್ತಿಯಾದೆ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com