ಜಾಹ್ನವಿ ದೋಷಕ್ಕೆ ಶ್ರೀದೇವಿ ಪೂಜೆ

ಇಂಗ್ಲಿಷ್ ವಿಂಗ್ಲಿಷ್ ಮೂಲಕ ಬಾಲಿವುಡ್ ನಲ್ಲಿ ಮತ್ತೆ ಛಾಪು ಮೂಡಸಲು ಯತ್ನಿಸಿದಳಾದರೂ ಶ್ರೀದೇವಿಗೆ ಅಂಥ ಯಾವ ಅವಕಾಶಗಳೂ ಮತ್ತೆ ಸಿಗಲಿಲ್ಲ...
ನಟಿ ಶ್ರೀದೇವಿ ಮತ್ತು ಜಾಹ್ನವಿ ಕಪೂರ್ (ಸಂಗ್ರಹ ಚಿತ್ರ)
ನಟಿ ಶ್ರೀದೇವಿ ಮತ್ತು ಜಾಹ್ನವಿ ಕಪೂರ್ (ಸಂಗ್ರಹ ಚಿತ್ರ)
Updated on: 

ಇಂಗ್ಲಿಷ್ ವಿಂಗ್ಲಿಷ್ ಮೂಲಕ ಬಾಲಿವುಡ್ ನಲ್ಲಿ ಮತ್ತೆ ಛಾಪು ಮೂಡಸಲು ಯತ್ನಿಸಿದಳಾದರೂ ಶ್ರೀದೇವಿಗೆ ಅಂಥ ಯಾವ ಅವಕಾಶಗಳೂ ಮತ್ತೆ ಸಿಗಲಿಲ್ಲ.

ಹೋಗಲಿ ನನ್ನ ನಸೀಬೇ ಇಷ್ಟೆಂದು ಸುಮ್ಮನಾಗಿದ್ದಾಳೆ. ಆದರೆ, ಮಗಳು ಜಾಹ್ನವಿಯನ್ನು ಹೇಗಾದರೂ ಬಾಲಿವುಡ್ ನಲ್ಲಿ ಖುಷಿಯಾಗಿಡಬೇಕೆಂದು ಶತಾಯ ಗತಾಯ ಯತ್ನಿಸುತ್ತಿದ್ದಾಳೆ. ಒಳ್ಳೆ ನಿರ್ದೇಶಕರ ಚಿತ್ರವೊಂದರಲ್ಲಿ ಅವಕಾಶ ಸಿಕ್ರಿೆ ಸಾಕು, ಮಗಳ ಜೀವನದಲ್ಲೊಂದು ಬ್ರೇಕ್ ಸಿಗುತ್ತೆ ಎಂಬ ಭರವಸೆ ಅವಳಿಗೆ. ಅಷ್ಟೇ ಅಲ್ಲ, ಜಾಹ್ನವಿ ಜಾತಕದಲ್ಲಿರುವ ಸರ್ಪದೋಶಕ್ಕೆ ಆಂಧ್ರ ಪ್ರದೇಶದ ಕಾಳಹಸ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಪೂಜೆಯನ್ನೂ ಮಾಡಿಸಿದ್ದಾಳಂತೆ.

ಒಳ್ಳೆಯ ಆರೋಗ್ಯ ಹಾಗೂ ಭವಿಷ್ಯಕ್ಕಾಗಿ ಈ ದೇವಸ್ಥಾನಕ್ಕೆ ಭೇಟಿ ನೀಡಿರುವುದಾಗಿಯೂ ಹೇಳಿದ್ದಾಳೆ. ಸುಮಾರು 45 ನಿಮಿಷಗಳು ನಡೆದ ಪೂಜೆಯಲ್ಲಿ ಆಂಧ್ರ ಮೂಲದ ಅಮ್ಮನೂ ಜತೆಗಿದ್ದರಂತೆ. ಶ್ರೀ ಆಸೆಗಳೆಲ್ಲ ನೆರವೇರಲಿ. ಮಗಳ ಭವಿಷ್ಯ ಉಜ್ವಲವಾಗಲಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com