ಪಿಕು ಆದ್ಮೇಲೆ ತನಿಷ್ಕ್ ಗೆ ರೂಪದರ್ಶಿ

ಸಾಮಾನ್ಯ ಮಧ್ಯಮ ವರ್ಗದವರ ಮನಮುಟ್ಟಬಹುದು ಎಂದುಕೊಂಡಿದ್ದ `ಪಿಕು' ಅಂದುಕೊಂಡಂತೆ ಎಲ್ಲರ ಹೃದಯ ಗೆಲ್ಲಲಿಲ್ಲ. ಚಿತ್ರದಲ್ಲಿ ನಟಿಸುವಾಗ ಬಹುತೇಕ ದೃಶ್ಯಗಳು ನನ್ನಪ್ಪನನ್ನು ನೆನಪಿಸಿದವು ಎನ್ನುತ್ತಿದ್ದ ದೀಪಿಕಾಳ ಗಿಮಿಕ್ಕೂ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಬಾಲ್ಯದ ದಿನಗಳನ್ನು ಸ್ಮರಿಸುವಂತೆ...
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on: 

ಸಾಮಾನ್ಯ ಮಧ್ಯಮ ವರ್ಗದವರ ಮನಮುಟ್ಟಬಹುದು ಎಂದುಕೊಂಡಿದ್ದ `ಪಿಕು' ಅಂದುಕೊಂಡಂತೆ ಎಲ್ಲರ ಹೃದಯ ಗೆಲ್ಲಲಿಲ್ಲ. ಚಿತ್ರದಲ್ಲಿ ನಟಿಸುವಾಗ ಬಹುತೇಕ ದೃಶ್ಯಗಳು ನನ್ನಪ್ಪನನ್ನು ನೆನಪಿಸಿದವು ಎನ್ನುತ್ತಿದ್ದ ದೀಪಿಕಾಳ ಗಿಮಿಕ್ಕೂ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಬಾಲ್ಯದ ದಿನಗಳನ್ನು ಸ್ಮರಿಸುವಂತೆ ಮಾಡಿ, ಭಾವುಕಳಾಗುವಂತೆ ಮಾಡಿದೆ ಎನ್ನುತ್ತಿದ್ದಾಳೆ ದೀಪಿಕಾ.

ಕಾರಣ ವೇನು ಗೊತ್ತಾ? ತನಿಷ್ಕ್ ಗೆ ರೂಪದರ್ಶಿಯಾಗುವ ಮೂಲಕ ಅವಳಾಯ್ಕೆ ಪ್ರಗತಿಪರ ಎನಿಸಿಕೊಂಡಿದೆ. ಕುಟುಂಬದೊಂದಿಗೆ ಬೆಂಗಳೂರಿನ ತನಿಷ್ಕ್ ಮಳಿಗೆಗೆ ಹೋಗುತ್ತಿದ್ದ ನೆನಪುಗಳು ಅವಳ ಮನದಲ್ಲಿ ಮಾಸದಂತೆ ಇವೆಯಂತೆ. ಮದುವೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಬ್ರ್ಯಾಂಡ್‍ನೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಅವಳಿಗೆ ಎಲ್ಲಿಲ್ಲದ ಖುಷಿ ತಂದಿದೆಯಂತೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಷ್ಕ್ ಉತ್ಪನ್ನಗಳನ್ನು ಪ್ರಚಾರಪಡಿಸುವ ಹೊಸದೊಂದು ಕಾರ್ಯಕ್ಕೆ ದೀಪಿಕಾ ಮುಂದಾಗಿದ್ದಾಳೆ. ಇದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com