

ನಟ ಶಾರುಖ್‍ಖಾನ್‍ನ ಫ್ಯಾನ್ ಒಬ್ಬ 15 ಲಕ್ಷ ರುಪಾಯಿ ಗೆದ್ದಿದ್ದಾನೆ! ಹೇಗೆ ಗೊತ್ತಾ? ಕಿಂಗ್ ಖಾನ್‍ನ ಅಭಿಮಾನಿ, ದೆಹಲಿಯ ನಿಖಿಲ್ ಜೈನ್ ಎಂಬಾತ ಶಾರುಖ್ ನಡೆಸಿಕೊಡುವ ಫೇರ್ನೆಸ್ ಕ್ರೀಮ್ ಜಾಹೀರಾತಿಗೆ ಮರುಳಾಗಿದ್ದಾನೆ.
ಇದರಂತೆ 2012 ಅಕ್ಟೋಬರ್ 8ರಂದು ಫೇರ್‍ನೆಸ್ ಕ್ರೀಮನ್ನು ಖರೀದಿಸಿದ್ದಾನೆ. ಜಾಹೀರಾತಿನ ಪ್ರಕಾರ ಮೂರು ವಾರದಲ್ಲಿ ನಿಖಿಲ್ ಬೆಳ್ಳಗಾಗಬೇಕಾಗಿತ್ತು. ಆದರೆ, ಎರಡು ತಿಂಗಳಾದರೂ ಬಣ್ಣ ಬದಲಾಗಲಿಲ್ಲ. ಬದಲಾಗಿ ಇರುವ ಬ್ಯೂಟಿಯೂ ಹೋಗಿತ್ತು. ತನ್ನ ಸೌಂದರ್ಯಕ್ಕೆ ಕುತ್ತು ಬಂತೆಂದು ಫೇರ್‍ನೆಸ್ ಕಂಪನಿ ವಿರುದ್ಧ ಸಿಟ್ಟೆದ್ದು ಜಿಲ್ಲಾ ಕನ್ಸೂಮರ್ ಕೋರ್ಟಿಗೆ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ಕೋರ್ಟಿನಲ್ಲಿ ಸುಮಾರು ಎರಡೂವರೆ ವರುಷ ವಾಗ್ವಾದ ನಡೆದು, ಕೊನೆಗೂ ನಿಖಿಲ್ ಜೈನ್‍ಗೆ ಗೆಲುವಾಗಿದೆ. ಫೆೀರ್‍ನೆಸ್ ಕಂಪನಿ ಈಗ 15 ಲಕ್ಷ ರುಪಾಯಿ ಪರಿಹಾರ ಕೊಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಇದೇ ರೀತಿಯ ಮುಖಭಂಗ ಈ ಹಿಂದೆ ಮಲಯಾಳಂ ನಟ ಮಮ್ಮೂಟಿಗೂ ಆಗಿತ್ತು. ಫೇರ್‍ನೆಸ್ ಕ್ರೀಮ್ ಜಾಹೀರಾತನ್ನು ನಂಬಬೇಡಿ' ಎಂದು ಸ್ವತಃ ಕಂಗನಾ ರಾಣೌತ್ ಕೂಡ ಕರೆಕೊಟ್ಟಿದ್ದಳು.