ಕಿವೀಸ್ ಕಣ್ಣು ಸಿದ್ಧಾರ್ಥ ಮಲ್ಹೋತ್ರಾ ಮೇಲೆ

ಬಾಲಿವುಡ್‍ನ ಸ್ಟಾರ್ ಗಳ ಮೇಲೆ ವಿದೇಶಿಗರ ಕಣ್ಣು ಬಿದ್ದಿದೆ! ನಮ್ಮ ಸಿದ್ಧಾರ್ಥ ಮಲ್ಹೋತ್ರಾ ಈಗ ನ್ಯೂಜಿಲೆಂಡಿನ ಟೂರಿಸಂ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ...
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (ಸಂಗ್ರಹ ಚಿತ್ರ)
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (ಸಂಗ್ರಹ ಚಿತ್ರ)
Updated on: 

ಬಾಲಿವುಡ್‍ನ ಸ್ಟಾರ್ ಗಳ ಮೇಲೆ ವಿದೇಶಿಗರ ಕಣ್ಣು ಬಿದ್ದಿದೆ! ನಮ್ಮ ಸಿದ್ಧಾರ್ಥ ಮಲ್ಹೋತ್ರಾ ಈಗ ನ್ಯೂಜಿಲೆಂಡಿನ ಟೂರಿಸಂ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. `ಸ್ಟೂಡೆಂಟ್ ಆಫ್ ದಿ  ಇಯರ್' ಖ್ಯಾತಿಯ ಸಿದ್ಧಾರ್ಥ್ ಮಲ್ಹೋತ್ರಾಗೆ ನ್ಯೂಜಿಲೆಂಡ್ ಎಂದರೆ ಮೊದಲಿನಿಂದಲೂ ಕ್ರಷ್.

ಅನೇಕ ಸಲ ಕಿವೀಸ್‍ಗೆ ಹೋಗಿ ಬಂದಿದ್ದಾರೆ. ಅಲ್ಲಿನ ಸದರ್ನ್ ಆಲ್ಪ್ಸ್ ನ ಬೆಳ್ಳಿ ಹಿಮದ ಬೆಟ್ಟಗಳು ಇವರನ್ನು ಅತಿಯಾಗಿ ಆಕರ್ಷಿಸಿವೆಯಂತೆ. ಈ ಸಂಗತಿಗಳನ್ನು ಗಮನಿಸಿಯೇ ನ್ಯೂಜಿಲೆಂಡ್  ಟೂರಿಸಂ ಇಲಾಖೆಯು ರಾಯಭಾರಿ ಆಗಿ ನೇಮಿಸಿದೆ. ನಟಿ ಸೆಲೆನಾ ಜೇಟ್ಲಿ ಈ ಹಿಂದೆ ಈಜಿಪ್ಟ್ ಟೂರಿಸಂಗೆ ರಾಯಭಾರಿ ಆಗಿದ್ದರು. ಅಕ್ಷಯïಕುಮಾರ್ ಕೆನಡಾದ ವಾಸೋದ್ಯಮಕ್ಕೆ ಪ್ರಚಾರ  ಕೊಟ್ಟಿದ್ದರು. ಈಗ ಫಾರಿನ್ ಟೂರಿಸಂನ ಗಮನ ಸೆಳೆದ ಮೂರನೇ ವ್ಯಕ್ತಿ ಸಿದ್ಧಾರ್ಥ್. ಬಿಗ್‍ಬಿ ಅಮಿತಾಭ್ ಬಚ್ಚನ್ ಗುಜರಾತ್ ಟೂರಿಸಂಗೆ, ಪ್ರಾಚಿ ದೇಸಾಯಿ ಗೋವಾ ಪ್ರವಾಸೋದ್ಯಮಕ್ಕೆ  ರಾಯಭಾರಿಯಾಗಿ ಸ್ವದೇಶದಲ್ಲೇ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com