ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು

ಬಾಲಿವುಡ್ ನ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿರುದ್ಧ ಮುಂಬೈ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಅಭಿಜಿತ್ ಭಟ್ಟಾಚಾರ್ಯ
ಅಭಿಜಿತ್ ಭಟ್ಟಾಚಾರ್ಯ

ಮುಂಬೈ: ಬಾಲಿವುಡ್ ನ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿರುದ್ಧ ಮುಂಬೈ ಪೊಲೀಸರು ಲೈಂಗಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ದುರ್ಗಾ ಪೂಜೆ ವೇಳೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರ್ಗಾ ಪೂಜೆ ಅಂಗವಾಗಿ ಗಾಯಕ ಕೈಲಾಶ್ ಖೇರ್ ವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಿಳೆಯೊಬ್ಬರಿಗೆ ಅಭಿಜಿತ್ ಭಟ್ಟಾಚಾರ್ಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾವಿರಾರು ಜನ ನೆರೆದಿದ್ದ ಹಿನ್ನೆಲೆಯಲ್ಲಿ ಸರಿಯಾಗಿ ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಾಗದ ಕಾರಣ ಎದ್ದು ನಿಂತು ವೀಕ್ಷಿಸುತ್ತಿದೆ, ಈ ವೇಳೆ ಅಭಿಜಿತ್ ಭಟ್ಟಾಚಾರ್ಯ ತಮ್ಮನ್ನು ಅನುಚಿತವಾಗಿ ಸ್ಪರ್ಷಿಸುತ್ತಿದ್ದರು ಎಂದು 34 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡುವಂತೆ ಎಚ್ಚರಿಸಿದ ಬೆನ್ನಲ್ಲೇ ಮಹಿಳೆ ವಿರುದ್ಧವೇ  ಕಿರುಚಿದ ಅಭಿಜಿತ್ ಭಟ್ಟಾಚಾರ್ಯ, ಸ್ಥಳದಲ್ಲಿದ್ದ ಕೆಲವು ಮಹಿಳಾ ಸ್ವಯಂ ಸೇವಕರನ್ನು ಕರೆದು ತಮ್ಮ ಕಚೇರಿಗೆ ಕರೆತರುವಂತೆ ಸೂಚನೆ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂದು  ಮಹಿಳೆ ಆರೋಪಿಸಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ತನಿಖೆ ನಡೆಯುತ್ತಿದ್ದು ಅಭಿಜಿತ್ ಭಟ್ಟಾಚಾರ್ಯಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com