ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ವಿಧಿವಶ

ಕಳೆದ ಒಂದು ತಿಂಗಳಿನಿಂದ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ಕಳೆದ ರಾತ್ರಿ ವಿಧಿವಶರಾಗಿದ್ದಾರೆ...
ಆದೇಶ್ ಶ್ರೀವಾಸ್ತವ
ಆದೇಶ್ ಶ್ರೀವಾಸ್ತವ
ಮುಂಬೈ: ಕಳೆದ ಒಂದು ತಿಂಗಳಿನಿಂದ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ಕಳೆದ ರಾತ್ರಿ ವಿಧಿವಶರಾಗಿದ್ದಾರೆ. 
'ಮಲ್ಟಿಪಲ್ ಮ್ಯೆಲೋಮ' ಎಂಬ ಬಗೆಯ ಕ್ಯಾನ್ಸರ್ ನಿಂದ 51 ವರ್ಷದ ಆದೇಶ್ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆದೇಶ ಶ್ರೀವಾಸ್ತವ ಅಂಧೇರಿಯ ಕೋಕಿಲಬೆನ್ ದಿರುಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ 12.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. 
ಹಿಂದಿಯ ಚಲ್ತೇ ಚಲ್ತೇ, ಬಾಬುಲ್, ಬಾಗ್ಬನ್, ಕಬಿ ಖುಷಿ ಕಬಿ ಗಮ್, ರಾಜನೀತಿ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಿಗೆ ಆದೇಶ್ ಸಂಗೀತ ಸಂಯೋಜಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com