ಮತ್ತೆ ಕೊಹ್ಲಿ-ಅನುಷ್ಕಾ ಒಂದಾಗುವುದು ಅಸಾಧ್ಯ?

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೆ ಒಂದಾಗುವ "ಏಪ್ರಿಲ್ ಫೂಲ್" ಸುದ್ದಿ ನೀವು ಓದಿರಬಹುದು. ಆದರೆ ವಾಸ್ತವತೆ ನಿಜಕ್ಕೂ ತದ್ವಿರುದ್ಧವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿಯಂತೂ ಈ ಜೋಡಿ ಒಂದಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ.
Virat Kohli-Anushka Sharma
Virat Kohli-Anushka Sharma
Updated on

ಮುಂಬೈ: ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೆ ಒಂದಾಗುವ "ಏಪ್ರಿಲ್ ಫೂಲ್" ಸುದ್ದಿ ನೀವು ಓದಿರಬಹುದು. ಆದರೆ ವಾಸ್ತವತೆ ನಿಜಕ್ಕೂ ತದ್ವಿರುದ್ಧವಾಗಿದ್ದು,  ಸದ್ಯದ ಪರಿಸ್ಥಿತಿಯಲ್ಲಿಯಂತೂ ಈ ಜೋಡಿ ಒಂದಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ.

ಬಾಲಿವುಡ್ ನ ಖ್ಯಾತ ಗಾಸಿಪ್ ವೆಬ್ ಸೈಟ್ ಬಾಲಿವುಡ್ ಲೈಫ್.ಕಾಮ್ ವರದಿ ಮಾಡಿರುವಂತೆ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಒಂದಾಗುವುದು ಅಸಾಧ್ಯವಂತೆ.  ವರದಿಯಲ್ಲಿರುವಂತೆ ಅನುಷ್ಕಾಳೊಂದಿಗಿನ ಸ್ನೇಹ ಸಂಬಂಧ ಮತ್ತೆ ಮುಂದುವರೆಸಲು ಕೊಹ್ಲಿ ಸಿದ್ಧನಾಗಿದ್ದರೂ, ಅನುಷ್ಕಾ ಮಾತ್ರ ಅದೇಕೋ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂದು  ಹೇಳಲಾಗಿದೆ. ವಿರಾಟ್‌ ಕೊಹ್ಲಿಯೊಂದಿಗೆ ಮತ್ತೆ ಒಂದಾದರೆ ಮತ್ತೂಮ್ಮೆ ತನ್ನ ಹೃದಯ ಒಡೆಯುವುದು ಖಚಿತ ಎಂಬ ರೀತಿಯ ಮಾತುಗಳನ್ನು ಅನುಷ್ಕಾ ತಮ್ಮ ಸ್ನೇಹಿತರೊಂದಿಗೆ ಆಡಿದ್ದಾರೆ  ಎಂದು ವರದಿ ಹೇಳಿದೆ.

ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾಗ, ಅಭಿಮಾನಿಗಳು ಅನುಷ್ಕಾಳನ್ನು ಟ್ರೋಲ್ ಮಾಡಿದ್ದರು. ಕೊಹ್ಲಿಯನ್ನು ಮತ್ತೆ ನಮಗೆ  ವಾಪಸ್ ನೀಡಿದ್ದಕೆ ಥ್ಯಾಂಕ್ಸ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಈ ಜೋಡಿಗಳ ಕಾಲು ಎಳೆದಿದ್ದರು. ಇದಕ್ಕೀ ತೀವ್ರ ಆಕ್ರೋಶಿತನಾಗಿದ್ದ ವಿರಾಟ್ ಕೊಹ್ಲಿ ತನ್ನ ಮಾಜಿ ಗೆಳತಿ ಅನುಷ್ಕ  ಶರ್ಮಾ ಪರವಾಗಿ ಸರಣಿ ಟ್ವೀಟ್‌ ಮಾಡಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆ ಬಹುಶಃ ಈ ಜೋಡಿ ಹಕ್ಕಿ ಮತ್ತೆ ಒಂದಾಗಬಹುದು ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಬಾಲಿವುಡ್ ನ ಕೆಲ ಮೂಲಗಳು ಈ ಜೋಡಿ ಮತ್ತೆ ಒಂದಾಗುವುದು ಅಸಾಧ್ಯ ಎನ್ನುತ್ತಿವೆ. ಪ್ರಸ್ತುತ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಸುಲ್ತಾನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ  ಅನುಷ್ಕಾ, ಮತ್ತೊಂದು "ಎ ದಿಲ್‌ ಹೈ ಮುಷ್ಕಿಲ್‌' ಎಂಬ ಚಿತ್ರದಲ್ಲಿಯೂ ಚಿತ್ರೀಕರಣದಲ್ಲಿ ಮುಳುಗಿದ್ದಾರಂತೆ. ಹೀಗಾಗಿ ಅನುಷ್ಕಾ ಶರ್ಮಾ ಬಳಿ ಸಿನಿಮಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ  ಚಿಂತಿಸುವಷ್ಟು ಸಮಯವಿಲ್ಲವಂತೆ.

ಇಬ್ಬರ ನಡುವೆ ಬಾಂಧವ್ಯ ಮತ್ತು ಚಿಗುರುವ ಅವಕಾಶ ಕ್ಷೀಣವಾಗಿದೆ. ಏಕಾಂಗಿಯಾಗಿರಲು ಅನುಷ್ಕಾ ಬಯಸಿದ್ದು, ಮತ್ತೂಮ್ಮೆ ವಿರಾಟ್‌ರನ್ನು ನಂಬಲು ಅವರು ಬಯಸುವುದಿಲ್ಲ. ಒಂದುವೇಳೆ  ಮತ್ತೆ ವಿರಾಟ್‌ರನ್ನು ನಂಬಿದರೆ ಕ್ರಿಕೆಟಿಗ ಮತ್ತೆ ತನ್ನ ಹೃದಯ ಒಡೆಯುವುದು ಖಚಿತ. ಆದ್ದರಿಂದ ತನ್ನನ್ನು ರಕ್ಷಿಸಿಕೊಳ್ಳಲು ಏನೇನು ಸಾಧ್ಯವೋ ಅದನ್ನೆಲ್ಲಾ ಅನುಷ್ಕಾ ಮಾಡುತ್ತಿದ್ದಾರೆ' ಎಂದು  ಮತ್ತೊಂದು ವೈಬ್‌ಸೈಟ್‌ ಒಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com