ಸ್ಟೀವನ್ ಸ್ಪಿಲ್ ಬರ್ಗ್ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ ಇರ್ಫಾನ್ ಖಾನ್

ಹಾಲಿವುಡ್ ನ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಸ್ಟೀವನ್ ಸ್ಪೀಲ್ ಬರ್ಗ್ ಅವರ ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ಇರ್ಫಾನ್ ಖಾನ್...
ಬಾಲಿವುಡ್ ನಟ ಇರ್ಫಾನ್ ಖಾನ್
ಬಾಲಿವುಡ್ ನಟ ಇರ್ಫಾನ್ ಖಾನ್
Updated on

ಮುಂಬೈ: ಹಾಲಿವುಡ್ ನ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಸ್ಟೀವನ್ ಸ್ಪೀಲ್ ಬರ್ಗ್ ಅವರ ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟ ಇರ್ಫಾನ್ ಖಾನ್ ನಿರಾಕರಿಸಿದ್ದಾರೆ. ಚಿತ್ರದಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಲು ಹೆಚ್ಚು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಚಿತ್ರದ ಪಾತ್ರದಲ್ಲಿ ನನ್ನನ್ನು ಗುರುತಿಸಿಕೊಳ್ಳಲು, ಅನ್ವೇಷಿಸಲು ಹೆಚ್ಚು ಅವಕಾಶವಿಲ್ಲ. ಹಾಗಾಗಿ ನಾನು ಒಪ್ಪಿಕೊಳ್ಳಲಿಲ್ಲ. ಅದಲ್ಲದಿದ್ದರೆ ಸ್ಟೀವನ್  ಅವರ ಚಿತ್ರದಲ್ಲಿ ಕೆಲಸ ಮಾಡಲು ಯಾರು ಇಷ್ಟಪಡುವುದಿಲ್ಲ ಹೇಳಿ ಎಂದು ಕೇಳುತ್ತಾರೆ ಇರ್ಫಾನ್ ಖಾನ್.

ಸ್ಲಮ್ ಡಾಗ್ ಮಿಲಿಯನೇರ್, ಲೈಫ್ ಆಫ್ ಪೈಯಂತಹ  ಹೆಸರು ಗಳಿಸಿದ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟ ಇರ್ಫಾನ್ ಖಾನ್ ಗೆ ಸ್ಪಿಲ್ ಬರ್ಗ್ ಚಿತ್ರದಲ್ಲಿ ನಟಿಸಲು ಅವಕಾಶ ಬಂದಿತ್ತು. ಅದರಲ್ಲಿ ಹಾಲಿವುಡ್ ತಾರೆ ಸ್ಕಾರ್ಲೆಟ್ ಜೊಹನ್ಸನ್ ಕೂಡ ನಟಿಸುತ್ತಿದ್ದಾರೆ.

ಸ್ಟೀವನ್ ಸಿನಿಮಾವನ್ನು ಸ್ವೀಕರಿಸುವುದೇ, ಬಿಡುವುದೇ ಎಂಬ ಸಂದಿಗ್ಧ ಪರಿಸ್ಥಿತಿ ಉಂಟಾಗಿತ್ತು. ನನ್ನ ವೃತ್ತಿ ಜೀವನದಲ್ಲಿ ಈಗ ಒಂದು ಹಂತಕ್ಕೆ ತಲುಪಿದ್ದೇನೆ. ಈಗ ನಾನು ನನ್ನ ಪ್ರೇಕ್ಷಕರನ್ನು ಪಾತ್ರದ ಮೂಲಕ ಅಚ್ಚರಿ ನೀಡಬೇಕು. ಅವರಿಗೆ ನಾನು ಏನಾದರೊಂದು ಹೊಸದನ್ನು ಕೊಡಬೇಕು. ನನ್ನ ಮುಂದಿನ ವೃತ್ತಿಜೀವನ ತುಂಬಾ ಮುಖ್ಯವಾಗಿರುತ್ತದೆ ಎನ್ನುತ್ತಾರೆ ಇರ್ಫಾನ್ ಖಾನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com