ವಿದ್ಯಾಬಾಲನ್ ಗೆ "ಕೇರಳ ಹೆಮ್ಮೆ" ಗೌರವ

ಖ್ಯಾತ ಬಾಲಿವುಡ್ ನಟಿ ವಿದ್ಯಾಬಾಲನ್ ಅವರಿಗೆ ವಿಶ್ವ ಮಲಯಾಳಿ ಕೌನ್ಸಿಲ್ ಹಾಗೂ ಕೈರಲಿ ಟಿವಿ ವತಿಯಿಂದ ‘ಪ್ರೈಡ್ ಆಫ್ ಕೇರಳ’ (ಕೇರಳದ ಹೆಮ್ಮೆ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ...
ನಟಿ ವಿದ್ಯಾಬಾಲನ್ (ಚಿತ್ರಕೃಪೆ: ಟ್ವಿಟರ್)
ನಟಿ ವಿದ್ಯಾಬಾಲನ್ (ಚಿತ್ರಕೃಪೆ: ಟ್ವಿಟರ್)
Updated on: 

ಮುಂಬೈ: ಖ್ಯಾತ ಬಾಲಿವುಡ್ ನಟಿ ವಿದ್ಯಾಬಾಲನ್ ಅವರಿಗೆ ವಿಶ್ವ ಮಲಯಾಳಿ ಕೌನ್ಸಿಲ್ ಹಾಗೂ ಕೈರಲಿ ಟಿವಿ ವತಿಯಿಂದ ‘ಪ್ರೈಡ್ ಆಫ್ ಕೇರಳ’ (ಕೇರಳದ ಹೆಮ್ಮೆ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ವಿಚಾರವನ್ನು ಸ್ವತಃ ನಟಿ ವಿದ್ಯಾಬಾಲನ್ ಅವರೇ ಹಂಚಿಕೊಂಡಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದು ಸಂತಸ ಹಂಚಿಕೊಂಡಿದ್ದಾರೆ. 38 ವರ್ಷದ ಬಾಲಿವುಡ್ ನಟಿ ವಿದ್ಯಾಬಾಲನ್​ ಮೂಲತಃ ಕೇರಳದವರಾಗಿದ್ದು, ಪರಿಣೀತಾ, ಪಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ದಿ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದಿದ್ದರು. ಪ್ರಸ್ತುತ ಈ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುಜಯ್ ಘೊಷ್ ನಿರ್ಮಾಣದ "TE3N'  ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ನವಾಜುದ್ದಿನ್ ಸಿದ್ದಿಕಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com