ಬಾಲಿವುಡ್

18 ವರ್ಷದ ಹಳೆ ಕೇಸ್ ನಲ್ಲಿ ನಟ ದಿಲಿಪ್ ಕುಮಾರ್ ನಿರ್ದೋಷಿ

ಚೆಕ್ ಬೌನ್ಸ್ ಗೆ ಸಂಬಂಧಿಸಿದ 18 ವರ್ಷದ ಹಳೆಯ ಪ್ರಕರಣವೊಂದರಲ್ಲಿ ಬಾಲಿವುಡ್ ಹಿರಿಯ ನಟ ದಿಲಿಪ್ ಕುಮಾರ್ ಅವರು ತಪ್ಪಿತಸ್ಥ ಅಲ್ಲ...

18 ವರ್ಷದ ಹಳೆ ಕೇಸ್ ನಲ್ಲಿ ನಟ ದಿಲಿಪ್ ಕುಮಾರ್ ನಿರ್ದೋಷಿ
ದಿಲಿಪ್ ಕುಮಾರ್ ಹಾಗೂ ಪತ್ನಿ
Published On :
ಮುಂಬೈ: ಚೆಕ್ ಬೌನ್ಸ್ ಗೆ ಸಂಬಂಧಿಸಿದ 18 ವರ್ಷದ ಹಳೆಯ ಪ್ರಕರಣವೊಂದರಲ್ಲಿ ಬಾಲಿವುಡ್ ಹಿರಿಯ ನಟ ದಿಲಿಪ್ ಕುಮಾರ್ ಅವರು ತಪ್ಪಿತಸ್ಥ ಅಲ್ಲ ಎಂದು ಮುಂಬೈ ಕೋರ್ಟ್ ತೀರ್ಪು ನೀಡಿದೆ. ಈ ವೇಳೆ 94 ವರ್ಷದ ದಿಲಿಪ್ ಕುಮಾರ್ ಅವರು ಕೋರ್ಟ್ ನಲ್ಲಿ ಹಾಜರಿರಲಿಲ್ಲ.
1998ರಲ್ಲಿ ದಿಲಿಪ್ ಕುಮಾರ್ ಅವರು ಗೌರವಾಧ್ಯಕ್ಷರಾಗಿದ್ದ ಕೋಲ್ಕತಾ ಮೂಲದ ಜಿಕೆ ಎಕ್ಸಿಮ್ ಇಂಡಿಯಾ ಪ್ರೈ, ಲಿ. ಕಂಪನಿ, ಬಾಲಿವುಡ್ ನಟ ಸೇರಿದಂತೆ ಇತರೆ ಮೂವರು ನಿರ್ದೇಶಕರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ನೀಡಿರುವ ಕೋರ್ಟ್, ದಿಲಿಪ್ ಕುಮಾರ್ ಹಾಗೂ ಮತ್ತೊಬ್ಬರನ್ನು ಆರೋಪ ಮುಕ್ತಗೊಳಿಸಿ, ಇತರೆ ಇಬ್ಬರು ನಿರ್ದೇಶಕರು ತಪ್ಪಿತಸ್ಥರು ಎಂದು ಹೇಳಿದೆ.
ದಿಲಿಪ್ ಕುಮಾರ್ ಪತ್ನಿ ಸೈರಾ ಬಾನು ಅವರು ನಿನ್ನೆ ಟ್ವಿಟ್ ಮಾಡಿ, ನಟನಿಗಾಗಿ ಪ್ರಾರ್ಥನೆ ಮಾಡಿ ಮತ್ತು ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದರು. ಅಲ್ಲದೆ ತಮ್ಮ ಪತಿ ಗಂಭೀರ ಆರೋಗ್ಯ ಸಮಸ್ಯಯಿಂದ ಬಳಲುತ್ತಿದ್ದರೂ ಪ್ರಕರಣದ ವಿಚಾರಣೆ ಮುಂದೂಡುವಂತೆ ಯಾವತ್ತು ಕೇಳಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.