ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕುರ್ಚಿ ಸಿಗದೆ ಸಿಟ್ಟಾದ ಝರೀನ್ ಖಾನ್!

ಹೇಟ್‍ಸ್ಟೋರಿ 3'ಯಲ್ಲಿ ಸನ್ನಿ ಲಿಯೋನ್‍ಗೆ ಪರ್ಯಾಯ ಎಂದು ಕರೆಸಿಕೊಂಡ ನಟಿ ಝರೀನ್ ಖಾನ್ ಈಗ ಗರಂ ಆಗಿದ್ದಾಳೆ! ಇದಕ್ಕೆಲ್ಲ ಕಾರಣ ಮೊನ್ನೆ ನಡೆದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮ...
ನಟಿ ಝರೀನ್ ಖಾನ್ ಮತ್ತು ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
ನಟಿ ಝರೀನ್ ಖಾನ್ ಮತ್ತು ನಟ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
ಹೇಟ್‍ಸ್ಟೋರಿ 3'ಯಲ್ಲಿ ಸನ್ನಿ ಲಿಯೋನ್‍ಗೆ ಪರ್ಯಾಯ ಎಂದು ಕರೆಸಿಕೊಂಡ ನಟಿ ಝರೀನ್ ಖಾನ್ ಈಗ ಗರಂ ಆಗಿದ್ದಾಳೆ! ಇದಕ್ಕೆಲ್ಲ ಕಾರಣ ಮೊನ್ನೆ ನಡೆದ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮ.
ಅವಾರ್ಡ್ ಸಿಗಲಿಲ್ಲ ಅನ್ನೋ ಬೇಜಾರು ಈಕೆಗಿಲ್ಲ. ಕೂರೋದಿಕ್ಕೆ ಕುರ್ಚಿ ಸಿಗಲಿಲ್ಲ ಎಂಬುದಷ್ಟೇ ಈಕೆಯ ಸಿಟ್ಟಿಗೆ ಕಾರಣ. ಹೌದು, ಹೇಟ್‍ಸ್ಟೋರಿ 3' ಚಿತ್ರಕ್ಕೂ ಅವಾರ್ಡ್ ಸಿಗಬಹುದೇನೋ  ಎಂಬಾಸೆಯಿಂದ ಝರೀನ್ ಕಾರ್ಯಕ್ರಮಕ್ಕೆ ಹೋಗಿದ್ದಳು. ಅಷ್ಟರಲ್ಲಾಗಲೇ ಫಂಕ್ಷನ್ ಶುರುವಾಗಿತ್ತು. ಎಲ್ಲ ತಾರೆಯರು ತಮ್ಮ ತಮ್ಮ ಹೆಸರಿದ್ದ ಕುರ್ಚಿಗಳ ಮೇಲೆ ಆಸೀನರಾಗಿದ್ದರು. ಆದರೆ, ಝರೀನ್‍ಖಾನ್ ಹೆಸರು ಯಾವ ಕುರ್ಚಿ ಮೇಲೂ ಬರೆದಿರಲಿಲ್ಲ. ಫಿಲ್ಮ್ಫೇರ್ ಸಂಘಟಕರು ಈಕೆಯನ್ನೇ ಮರೆತಿದ್ದರಂತೆ. ತನ್ನ ಕುರ್ಚಿಗಾಗಿ ಅತ್ತಿತ್ತ ಹುಡುಕಾಡಿ ಸುಸ್ತಾದ ಝರೀನ್‍ಳನ್ನು ಬೇರೆ  ನಟಿಯರು ನೋಡಿ ನಗುತ್ತಿದ್ದರಂತೆ.
ಇದನ್ನು ಗಮನಿಸಿದ ಸಲ್ಮಾನ್‍ಖಾನ್ ಎದ್ದುಬಂದು, ತಮ್ಮ ಸೀಟಿನಲ್ಲೇ ಕುಳಿತುಕೊಳ್ಳಲು ಆಹ್ವಾನಿಸಿದರು. ಆದರೆ, ಈಕೆ ಸಲ್ಮಾನ್ ಮಾತು ಕೇಳದೆ ಸಿಟ್ಟಿನಲ್ಲಿ ಹೊರಟೇ ಹೋದಳಂತೆ. ಸಲ್ಮಾನ್  ಈಕೆಗೆ ಸೀಟು ಬಿಟ್ಟು ಕೊಡಲೂ ಕಾರಣವಿತ್ತು. ಝರೀನ್‍ಳನ್ನು ಬಾಲಿವುಡ್‍ಗೆ ಪರಿಚಯಿಸಿದ್ದೇ ಸಲ್ಮಾನ್‍ಖಾನ್. ಅದು 'ವೀರ್' ಚಿತ್ರದ ಮೂಲಕ. ಅಲ್ಲಿ ಈಕೆ ರಾಜಕುಮಾರಿ ಯಶೋಧರಾ ಆಗಿ ಕಾಣಿಸಿಕೊಂಡಿದ್ದಳು. ತನ್ನ ನಟಿಗೆ ಸೀಟು ಸಿಗದೇ ಇರೋದನ್ನು ಕಂಡು `ಬೀಯಿಂಗ್ ಹ್ಯುಮನ್' ನೆರವಿಗೆ ಹೋಗದೇ ಇರುತ್ತಾನಾ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com