3ನೇ ಬಾರಿಯೂ ಮಹಿಳಾ ಆಯೋಗದ ವಿಚಾರಣೆಯಿಂದ ಸಲ್ಲು ಎಸ್ಕೇಪ್: ಪತ್ರ ರವಾನೆ

3 ನೇ ಬಾರಿಯೂ ಖುದ್ದು ವಿಚಾರಣೆಗೆ ಹಾಜರಾಗದ ಸಲ್ಮಾನ್‌ ಆಯೋಗಕ್ಕೆ ಪತ್ರವೊಂದನ್ನು ಕಳುಹಿಸಿದ್ದಾರೆ. ಪತ್ರದಲ್ಲಿ ಏನು ತಿಳಿಸಿದ್ದಾರೆ ಎಂಬ ಅಂಶದ ಬಗ್ಗೆ ಈಗಲೇ ಏನು ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್

: ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗಿದ್ದೆ ಹೇಳಿಕೆಗೆ ಸಂಬಂಧಿಸಿದಂತೆ ನಟ ಸಲ್ಮಾನ್‌ ಖಾನ್‌ ಅವರು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಮುಂದೆ ಸತತ ಮೂರನೇ ಬಾರಿಯೂ ವಿಚಾರಣೆಗೆ ಹಾಜರಾಗಲಿಲ್ಲ.

3 ನೇ ಬಾರಿಯೂ ಖುದ್ದು ವಿಚಾರಣೆಗೆ ಹಾಜರಾಗದ ಸಲ್ಮಾನ್‌ ಆಯೋಗಕ್ಕೆ ಪತ್ರವೊಂದನ್ನು ಕಳುಹಿಸಿದ್ದಾರೆ. ಪತ್ರದಲ್ಲಿ ಏನು ತಿಳಿಸಿದ್ದಾರೆ ಎಂಬ ಅಂಶದ ಬಗ್ಗೆ ಈಗಲೇ ಏನು ಹೇಳಲಾಗದು. ಈ ಹಂತದಲ್ಲಿ ಪತ್ರದಲ್ಲಿ ಏನಿದೆ ಎಂಬುದನ್ನು ಬಹಿರಗಂ ಪಡಿಸಲಾಗದು ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ್ ರಾಹತ್ಕರ್‌ ಹೇಳಿದ್ದಾರೆ.

ಸಲ್ಮಾನ್ ಬರೆದಿರುವ ಪತ್ರವನ್ನು ಆಯೋಗದ ಕಾನೂನು ಇಲಾಖೆಗೆ ಕಳುಹಿಸಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ರಾಹತ್ಕರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸುಲ್ತಾನ್ ಸಿನಿಮಾದ ಚಿತ್ರೀಕರಣದ ನಂತರ ನಾನು ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗುತ್ತಿದ್ದೆ ಎಂದು ಹೇಳಿಕೆ ನೀಡುವ ಮೂಲಕ ತೀವ್ರ ವಿವಾದಕ್ಕೆ ಗುರಿಯಾಗಿದ್ದ  ಸಲ್ಮಾನ್‌ಗೆ ಆಯೋಗ ವಿಚಾರಣೆಗೆ ಹಾಜರಾಗಲು ಮೂರು ಬಾರಿ ನೋಟಿಸ್‌ ಜಾರಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com