2 ಕೋಟಿ ಟ್ವೀಟರ್ ಹಿಂಬಾಲಕರನ್ನು ಗಳಿಸಿದ ಶಾರುಖ್ ಖಾನ್

ಬಾಲಿವುಡ್ ನಟ ಶಾರುಖ್ ಖಾನ್ ಅವರ ತನ್ನ ಟ್ವೀಟರ್ ಹಿಂಬಾಲಕರ ಸಂಖ್ಯೆ 2 ಕೋಟಿ ದಾಟಿದೆ...
ಶಾರುಖ್ ಖಾನ್
ಶಾರುಖ್ ಖಾನ್
Updated on: 

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ತನ್ನ ಟ್ವೀಟರ್ ಹಿಂಬಾಲಕರ ಸಂಖ್ಯೆ 2 ಕೋಟಿ ದಾಟಿದೆ.

ಟ್ವೀಟರ್ ಹಿಂಬಾಲಕರ ಸಂಖ್ಯೆ 2 ಕೋಟಿ ದಾಟಿದ್ದರಿಂದ ಸಂತಸದಲ್ಲಿರುವ ಶಾರುಖ್ ಖಾನ್ ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಲು ವಿಡಿಯೋ ಚಿತ್ರಿಕೆಯೊಂದನ್ನು ರೂಪಿಸಿದ್ದಾರೆ.

ವಿಡಿಯೋದಲ್ಲಿ ತನ್ನ ಅಭಿಮಾನಿಗಳ ಸಂದೇಶಗಳಿಂದಾಗಿಯೇ ನಾನು ಉತ್ತಮ ವ್ಯಕ್ತಿಯಾಗಲು ಸಾಧ್ಯವಾಗಿದೆ. ನೀವು ಪ್ರತಿನಿತ್ಯ ಕಳಿಸುವ ಸಂದೇಶಗಳು ನನಗೆ ದಿನ ನಿತ್ಯದ ಸಂಕಷ್ಟಗಳಲ್ಲಿ ಸಿಟ್ಟು, ಅಸಹನೆ, ಆಕ್ರೋಶ, ಒತ್ತಡದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗಿದೆ ಎಂದು ಹೇಳಿದ್ದಾರೆ.

ಟ್ವೀಟರ್ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಗಳಿಸಿರುವಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದಿದ್ದಾರೆ. 21.3 ಮಿಲಿಯನ್ ಹಿಂಬಾಲಕರನ್ನು ಬಚ್ಚನ್ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 20.8 ಮಿಲಿಯನ್ ಹಿಂಬಾಲಕರೊಂದಿಗೆ ಎರಡನೇ ಸ್ಥಾನದಲ್ಲಿ ದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com