ಜುಹು ರಸ್ತೆಯಲ್ಲಿ ತಮ್ಮ 'ಪ್ರಯೋಗ'ದ ಅನುಭವದ ಬಗ್ಗೆ ಮಾತನಾಡಿದ ಸೋನು, ಅದೊಂದು ಅದ್ಭುತ ಅನುಭವವಾಗಿತ್ತು. ನನ್ನ ಹಾಡನ್ನು ಕೇಳಿದ ಒಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ನನ್ನ ಕೈ ಮುಟ್ಟಿ ಅಂಕಲ್ ನೀವು ತಿಂಡಿ ತಿಂದಿದ್ದೀರಾ? ಎಂದು ಕೇಳಿ ನನ್ನ ಕೈಯಲ್ಲಿ 12 ರುಪಾಯಿ ಇಟ್ಟು ಹೋದರು. ಲಕ್ಷ ದುಡ್ಡು ಸಂಪಾದನೆ ಮಾಡಿದ್ದಕ್ಕಿಂತಲೂ ಹೆಚ್ಚು ಖುಷಿಯಾಯಿತು ಆ ಹಣವನ್ನು ನೋಡಿ. ನಾನೀಗ ಆ ಹಣವನ್ನು ಫ್ರೇಮ್ ಹಾಕಿಟ್ಟಿದ್ದೀನಿ, ಇನ್ನೊಂದು ಸಲ ಆತನನ್ನು ಭೇಟಿಯಾಗಿ ಅವರಿಗೆ ವಾಪಸ್ ಏನಾದರೂ ನೀಡಬೇಕಿದೆ.