ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಗೆ ಸೆಲೆಬ್ರಿಟಿ ವುಮನ್ ಆಫ್ ದ ಈಯರ್ ಪ್ರಶಸ್ತಿ

ಮುಂಬಯಿ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ವರ್ಷದ ಹೆಸರಾಂತ ಮಹಿಳೆ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಔಟ್ಲುಕ್ ಸಂಸ್ಥೆ ನೀಡುವ ‘ಔಟ್ಸ್ಟ್ಯಾಂಡಿಂಗ್ ಸೆಲೆಬ್ರಿಟಿ ವುಮನ್ ಆಫ್ ದ ಈಯರ್’ ಪ್ರಶಸ್ತಿಗೆ ಐಶ್ವರ್ಯಾ ರೈ ಭಾಜನರಾಗಿದ್ದಾರೆ. ಔಟ್ಲುಕ್ ಬಿಜಿನೆಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 19 ಮಹಿಳಾ ಉದ್ಯಮಿಗಳು ತಮ್ಮ ಔದ್ಯಮಿಕ ಜೀವನ ಹಾಗೂ ಯಶಸ್ಸಿನ ಪ್ರಯಾಣದ ಕುರಿತು ವಿಚಾರಗಳನ್ನು ಮಂಡಿಸಿದರು.
42 ವರ್ಷದ ಐಶ್ವರ್ಯಾ ರೈ ಅವರ ಜೀವನದ ಅತ್ಯಂತ ಸುಮಧುರ ಅನುಭವ ಎಂದರೆ, ಆರಾಧ್ಯ ಬಚ್ಚನ್ ಅಂತೆ. ಹೀಗೆ ತಮ್ಮ ಜೀವನದ ಬಗ್ಗೆ ಮಾತನಾಡುತ್ತ ಅವರು ಇತರ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ. ಯಶಸ್ಸಿನ ಸೂತ್ರಗಳ ಬಗ್ಗೆ ತಿಳಿಸುತ್ತ, ಮಹಿಳೆಯರು ಪ್ರತಿದಿನ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು ಎಂಬ ಕಿವಿಮಾತನ್ನೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


