ಸೇನಾಧಿಕಾರಿ ಪಾತ್ರದಲ್ಲಿ ಸಂಜಯ್ ದತ್

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಮುಂದಿನ ಚಿತ್ರದಲ್ಲಿ....
ಸಂಜಯ್ ದತ್
ಸಂಜಯ್ ದತ್
Updated on: 
ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಮುಂದಿನ ಚಿತ್ರದಲ್ಲಿ ಸೇನಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
ಗಿರೀಶ್ ಮಲಿಕ್ ನಿರ್ದೇಶನದಲ್ಲಿ ಮೂಡಿಸಿರುವ ತೊರ್ಬಝ್ ಚಿತ್ರದಲ್ಲಿ ಸಂಜಯ್ ದತ್ ಸೇನಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಥೆ ಕೇಳುತ್ತಿದ್ದಂತೆ ದತ್ ನಟಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಭಯೋತ್ಪಾದನೆಗಾಗಿ ಮಕ್ಕಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದು ಚಿತ್ರದ ಕಥಾವಸ್ತುವಾಗಿದೆ. 
ಈ ಚಿತ್ರದಲ್ಲಿ ನಾನು ಅರ್ಥಪೂರ್ಣ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಮರೆಯಲಾಗದಂತ ಚಿತ್ರ ನೀಡುತ್ತಿದ್ದೇನೆ ಎಂದು ದತ್ ಹೇಳಿದ್ದಾರೆ. 
ಆಫ್ಘಾನಿಸ್ತಾನದಲ್ಲಿ ಮಕ್ಕಳನ್ನು ಆಹ್ಮಾಹುತಿ ಬಾಂಬರ್ ಗಳಾಗಿ ಹೇಗೆ ತಯಾರು ಮಾಡಲಾಗುತ್ತಿದೆ ಎಂಬ ಗಂಭೀರ ವಿಚಾರವನ್ನು ಗಿರೀಶ್ ಮಲಿಕ್ ಚಿತ್ರವನ್ನಾಗಿಸುತ್ತಿದ್ದಾರೆ. ಚಿತ್ರವನ್ನು ರಾಜು ಚಡ್ಡಾ ಮತ್ತು ರಾಹುಲ್ ಮಿತ್ರ ನಿರ್ಮಿಸುತ್ತಿದ್ದು, 2017ರಲ್ಲಿ ಚಿತ್ರ ಸೆಟ್ಟೇರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com