ಭಾರೀ ಮೊತ್ತಕ್ಕೆ ಬಾಹುಬಲಿ ಸರಣಿಯ ವಿಡಿಯೋ ಸ್ಟ್ರೀಮಿಂಗ್ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

ಜಗತ್ತಿನ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ನೆಟ್‌ಫ್ಲಿಕ್ಸ್ ಸಂಸ್ಧೆ ಭಾರತೀಯ ಚಿತ್ರರಂಗದ ಬಾಕ್ಲ್ ಬಸ್ಟರ್ ಚಿತ್ರ ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರದ ಪ್ರಸಾರದ ಹಕ್ಕುಗಳನ್ನು...
ಬಾಹುಬಲಿ
ಬಾಹುಬಲಿ
Updated on: 
ಜಗತ್ತಿನ ಅತಿದೊಡ್ಡ ವಿಡಿಯೋ ಸ್ಟ್ರೀಮಿಂಗ್ ನೆಟ್‌ಫ್ಲಿಕ್ಸ್ ಸಂಸ್ಧೆ ಭಾರತೀಯ ಚಿತ್ರರಂಗದ ಬಾಕ್ಲ್ ಬಸ್ಟರ್ ಚಿತ್ರ ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರದ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. 
ಲೈವ್ ಮಿಂಟ್ ವರದಿ ಪ್ರಕಾರ ನೆಟ್‌ಫ್ಲಿಕ್ಸ್ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರದ ತಮಿಳು, ಹಿಂದಿ ಮತ್ತು ಮಲಯಾಳಂ ಆವೃತ್ತಿಯ ಪ್ರಸಾರದ ಹಕ್ಕಗಳನ್ನು ಸುಮಾರು 25.5 ಕೋಟಿ ರುಪಾಯಿಗೆ ಖರೀದಿಸಿದೆ ಎಂದು ತಿಳಿದುಬಂದಿದೆ. ಎಸ್ಎಸ್ ರಾಜಮೌಳಿ ಸೇರಿದಂತೆ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಜತೆ ಸಹ ನೆಟ್‌ಫ್ಲಿಕ್ಸ್ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಹೇಳಲಾಗಿದೆ. 
18 ತಿಂಗಳ ಹಿಂದೆ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ನೆಟ್‌ಫ್ಲಿಕ್ಸ್ ಸಂಸ್ಧೆ ಬಾಹುಬಲಿ ಸರಣಿಯನ್ನು ಖರೀದಿಸಿರುವುದಾಗಿ ಟ್ವೀಟರ್ ನಲ್ಲಿ ಅಧಿಕೃತವಾಗಿ ಘೋಷಿಸಿದೆ. 
ಟಿವಿ ಕಾರ್ಯಕ್ರಮಗಳು, ಸಿನಿಮಾಗಳನ್ನು ನಿಮ್ಮ ಕಂಪ್ಯೂಟರ್, ಮೊಬೈಲ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ನೋಡಲು ನೆಟ್‌ಫ್ಲಿಕ್ಸ್ ಸಂಸ್ಥೆ ಅನುಕೂಲ ಮಾಡಿಕೊಡುತ್ತದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com