ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ ಪಟ್ಟಿಯಲ್ಲಿ ಮತ್ತೆ ಸಲ್ಮಾನ್ ನಂಬರ್ 1!

ಬಾಲಿವುಡ್ ನಟ ಸಲ್ಮಾನ್ ಖಾನ್, ಫೋರ್ಬ್ಸ್ ಇಂಡಿಯಾ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆದಾಯವನ್ನು 232.83...
ಸಲ್ಮಾನ್ ಖಾನ್-ಶಾರುಖ್ ಖಾನ್-ವಿರಾಟ್ ಕೊಹ್ಲಿ
ಸಲ್ಮಾನ್ ಖಾನ್-ಶಾರುಖ್ ಖಾನ್-ವಿರಾಟ್ ಕೊಹ್ಲಿ
Updated on: 
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್, ಫೋರ್ಬ್ಸ್ ಇಂಡಿಯಾ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆದಾಯವನ್ನು 232.83 ಕೋಟಿ ಎಂದು ಹೇಳಲಾಗಿದೆ.
2016ರಲ್ಲಿ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದಿಕ್ಕಿ ಮೊದಲನೇ ಸ್ಥಾನಕ್ಕೇರಿದ್ದು ಇದೀಗ ಮತ್ತೆ ಮೊದಲನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. 
ಇನ್ನು ಎರಡನೇ ಸ್ಥಾನದಲ್ಲಿರುವ ಶಾರುಖ್ ಅವರ ಒಟ್ಟು ಆದಾಯ 170.5 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಬಾಕ್ಸ್ ಆಫಿಸ್, ಜಾಹಿರಾತು ಪ್ರಚಾರದಿಂದ ಪಡೆದ ಆದಾಯವಾಗಿದೆ.
100.72 ಕೋಟಿ ಆದಾಯದೊಂದಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಅಕ್ಷಯ್ ಕುಮಾರ್ 98 ಕೋಟಿ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 
ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಐದನೇ ಸ್ಥಾನ. ಬಾಲಿವುಡ್ ನಟ ಆಮಿರ್ ಖಾನ್ 6ನೇ ಸ್ಥಾನ ಹಾಗೂ ಪ್ರಿಯಾಂಕ ಚೋಪ್ರಾ ಏಳನೇ ಸ್ಥಾನದಲ್ಲಿದ್ದಾರೆ. 
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಎಂಡನೇ ಸ್ಥಾನ, ಹೃತಿಕ್ ರೋಷನ್ ಒಂಬತ್ತನೇ ಸ್ಥಾನ ಹಾಗೂ ರಣವೀರ್ ಸಿಂಗ್ 10ನೇ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com