"ಪುರುಷರಿಗಿಂತ ಮಹಿಳೆಯರು ಶ್ರೇಷ್ಠ ಎಂದು ಹೇಳುತ್ತಿಲ್ಲ. ಹಾಗೆ ಹೇಳುವುದು ಸೂಕ್ತ ಎಂಬ ನಂಬಿಕೆ ಇಲ್ಲ. ಪುರುಷರು, ಮಹಿಳೆಯರು ಇಬ್ಬರಿಗೂ ಸಮಾನತೆ ಇರಬೇಕು. ನಾನು ಮಹಿಳಾ ಹಕ್ಕುಗಳ ಅಭಿಯಾನದ ಭಾಗವಾಗಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಸ್ತ್ರೀವಾದಿಯಲ್ಲ ಎಂಬ ಅರ್ಥ ಕಲ್ಪಿಸಬೇಕಿಲ್ಲ". ಎಂದಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಈಗಾಗಲೇ ಸಾಕಷ್ಟು ಮಾತನಾಡಲಾಗಿದೆ. ಸಮಾನತೆ ಎಂಬುದು ಮಹಿಳೆಯರ ಜನ್ಮಸಿದ್ಧ ಹಕ್ಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಲಿಯಾ ಭಟ್ ಅಭಿಪ್ರಾಯಪಟ್ಟಿದ್ದಾರೆ.