ಸಂಜಯ್ ದತ್ ' ಆತ್ಮಚರಿತ್ರೆ ' ಮುಂದಿನ ವರ್ಷ ಬಿಡುಗಡೆ

ಬಾಲಿವುಡ್ ನಟ ಸಂಜಯ್ ದತ್ ಬರೆಯುತ್ತಿರುವ ಆತ್ಮಚರಿತ್ರೆ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಹಿಂದೆ ಏಲ್ಲಿಯೂ ಹೇಳದ ಅನೇಕ ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕದಲ್ಲಿ ಸಂಜಯ್ ದತ್ ಹೇಳುತ್ತಿದ್ದಾರೆ.
ಸಂಜಯ್ ದತ್
ಸಂಜಯ್ ದತ್
Updated on: 

ಮುಂಬೈ : ಬಾಲಿವುಡ್ ನಟ ಸಂಜಯ್ ದತ್  ಬರೆಯುತ್ತಿರುವ ಆತ್ಮಚರಿತ್ರೆ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಹಿಂದೆ ಏಲ್ಲಿಯೂ ಹೇಳದ ಅನೇಕ ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕದಲ್ಲಿ ಸಂಜಯ್ ದತ್ ಹೇಳುತ್ತಿದ್ದಾರೆ.

ಸಂಜಯ್ ದತ್ ಅವರ 60 ಹುಟ್ಟುಹಬ್ಬದ ಕೊಡುಗೆಯಾಗಿ ಜುಲೈ 29, 2019ರಂದು ಈ ಪುಸ್ತಕವನ್ನು  ಹರ್ಪರ್ ಕೊಲ್ಲಿನ್ಸ್   ಪ್ರಕಾಶಕ ಸಂಸ್ಥೆ ಬಿಡುಗಡೆ ಮಾಡಲಿದೆ.

ಈ ಪುಸ್ತಕದೊಂದಿಗೆ  ಸಂಜಯ್ ದತ್ ಅವರ ಮನದಾಳದ ಮಾತುಗಳನ್ನು ಕೇಳುವ ತವಕದಲ್ಲಿ ಓದುಗರಿದ್ದಾರೆ. ಸಂಜಯ್ ದತ್  ಯೌವ್ವನ, 80 ಹಾಗೂ 90 ರ ದಶಕದಲ್ಲಿ ಬಾಲಿವುಡ್ ನಲ್ಲಿನ ಅವರ ವೈಭವಯುತ ಜೀವನ, ಹಾಗೂ ಕಾರಾಗೃಹದಲ್ಲಿನ ಅನುಭವಗಳನ್ನು  ಸಂಜಯ್ ದತ್ ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಾಶಕ ಸಂಸ್ಥೆ ತಿಳಿಸಿದೆ.

ವಿವಾದಾತ್ಮಕ ನಟನ ಕುರಿತ ಸಂಜು ಬಯೋಪಿಕ್ ಈಗಾಗಲೇ ಬಿಡುಗಡೆಯಾಗಿದೆ. ರಣಬೀರ್ ಕಪೂರ್ ಹಾಗೂ ದತ್  ಅಭಿಯನದ  ಈ ಚಿತ್ರ ಬಾಕ್ಸ್ ಅಫೀಸ್ ನಲ್ಲಿ  250 ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆ ಎಲ್ಲಿಯೂ ಹೇಳದ ಅನೇಕ ಸಂಗತಿಗಳು, ಕಷ್ಟ , ಸುಖಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದು, ಪುಸ್ತಕ ಬಿಡುಗಡೆಗಾಗಿ ಕಾಯುತ್ತಿರುವುದಾಗಿ ಸಂಜಯ್ ದತ್  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com